ETV Bharat / bharat

50 ದಿನಗಳ ಲಾಕ್‌ಡೌನ್: ಆಗ್ರಾದಲ್ಲಿ ಕೊಂಚ ಇಳಿಮುಖವಾದ ಕೊರೊನಾ ಕೇಸ್​​​​​​​​​​​​​

ಭಾನುವಾರ ಹೊಸದಾಗಿ 9 ಪ್ರಕರಣಗಳು ಕಂಡು ಬಂದರೆ, ಸೋಮವಾರ 13 ಹಾಗೂ ಮಂಗಳವಾರ ಅದು 12 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಜೊತೆಗೆ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ. ಎನ್​. ಸಿಂಗ್​ ತುಸು ನಿಟ್ಟುಸಿರು ಬಿಟ್ಟಿದ್ದಾರೆ.

Agra: After 50 days of lockdown,
ಆಗ್ರಾ ಇಳಿಮುಖವಾದ ಕೊರೊನಾ ಪ್ರಕರಣಗಳು
author img

By

Published : May 13, 2020, 5:03 PM IST

ಆಗ್ರಾ : 50 ದಿನಗಳ ಲಾಕ್​ಡೌನ್​ನಿಂದಾಗಿ ಕೊರೊನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ ಎಂದು ಎಂದು ಜಿಲ್ಲಾಧಿಕಾರಿ ಪಿ. ಎನ್​. ಸಿಂಗ್​ ತಿಳಿಸಿದ್ದಾರೆ

ಭಾನುವಾರ ಹೊಸದಾಗಿ 9 ಪ್ರಕರಣಗಳು ಕಂಡು ಬಂದರೆ, ಸೋಮವಾರ 13 ಹಾಗೂ ಮಂಗಳವಾರ ಅದು 12 ಹೊಸ ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಜೊತೆಗೆ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದು ಡಿಸಿ ಹೇಳಿದ್ದಾರೆ.

ಮೇ ಮೊದಲ ವಾರದಲ್ಲಿ ಕೊರೊನಾ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಮುಖ್ಯಮಂತ್ರಿ ರಚಿಸಿದ ಜಿಲ್ಲೆಯ ಆರು ಹಿರಿಯ ಅಧಿಕಾರಿಗಳು ವಿಶೇಷ ತಂಡ ಖಾಸಗಿ ವೈದ್ಯರು, ಎನ್‌ಜಿಒ ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದೆ. ದಿನಕ್ಕೆ ಎರಡು ಬಾರಿ ಮುಖ್ಯಮಂತ್ರಿಗೆ ವರದಿಗಳನ್ನು ಕಳುಹಿಸಲಾಗುತ್ತಿದೆ ಎಂದು ಇದೇ ವೇಳೆ, ಡಿಸಿ ಮಾಹಿತಿ ನೀಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 369 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 777 ಮಂದಿಗೆ ಕೊರೊನಾ ಪಾಸಿಟಿವ್​ ಬಂದಿದೆ. ಒಟ್ಟಾರೆ 25 ಸಾವುಗಳು ಜಿಲ್ಲೆಯಲ್ಲಿ ಸಂಭವಿಸಿವೆ. ಜೊತೆಗೆ 9,751 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಡಿಸಿ ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.