ಕಾಸರಗೋಡು: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ 8ನೇ ತರಗತಿ ವಿದ್ಯಾರ್ಥಿನಿ ಸಿನಾಶಾ 12 ಕಾದಂಬರಿಗಳನ್ನು ಬರೆದಿದ್ದಾಳೆ. ತನ್ನ ತಾಯಿ, ಸಿನಾಶಾಳಿಗಾಗಿ ಓದುತ್ತಿದ್ದ ರಷ್ಯಾದ ಮಕ್ಕಳ ಕಥೆಗಳಿಂದ ಈ ಪುಟ್ಟ ಸಾಹಿತಿ ಅಕ್ಷರಗಳ ಜಗತ್ತಿಗೆ ಪ್ರಯಾಣ ಬೆಳೆಸಿದ್ದಾಳೆ!
ಮೊದಲ ತರಗತಿಯಲ್ಲಿದ್ದಾಗಲೇ ತನ್ನ ವೈಯಕ್ತಿಕ ದಿನಚರಿಯಲ್ಲಿ ಜರ್ನಲಿಂಗ್ ಪ್ರಾರಂಭಿಸಿದ ಸಿನಾಶಾ, 8ನೇ ತರಗತಿಗೇ ಸಂಪೂರ್ಣ ಕಾದಂಬರಿಕಾರ್ತಿಯಾಗಿ ಬೆಳೆದು ಪ್ರಬುದ್ಧಳಾದಳು. ಅವಳ ಅಧ್ಯಯನಗಳು ಮತ್ತು ಚಟುವಟಿಕೆಗಳು ಯುವ ಬರಹಗಾರರನ್ನು ರೂಪಿಸಿವೆ.
ಸಿನಾಶಾ ಕೃತಿಗಳಾದ ತಲಿರಿಲಾಯಂ ಒರುತುಳ್ಳಿ ನೀಲವಂ, ಪೂವಿಯೂಣ್ಣ ಇಲಚಾರ್ತುಕಲ್, ಕಡಲಿಂಡೆ ರಹಸ್ಯಂ, ಎ ಗರ್ಲ್ ಅಂಡ್ ದಿ ಟೈಗರ್ಸ್, ಮಿಸ್ಟೀರಿಯಸ್ ಫಾರೆಸ್ಟ್ ಮತ್ತು ಸಾಂಗ್ ಆಫ್ ದಿ ರಿವರ್ ಈಗಾಗಲೇ ಮುದ್ರಿತವಾಗಿದೆ. ಇಂಗ್ಲಿಷ್ ಭಾಷೆಯಲ್ಲೂ ತಮ್ಮ ಚೊಚ್ಚಲ ಪದ್ಯವೊಂದನ್ನು ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: ವಿರುಷ್ಕಾಗೆ ಹೆಣ್ಣು ಮಗು ಜನನ.. 'ಈ ಸಲ ಕಪ್ ಖಂಡಿತಾ ನಮ್ದೇ' ಅಂತಿದ್ದಾರೆ ಫ್ಯಾನ್ಸ್..
ಅವಳು 6ನೇ ತರಗತಿಯಲ್ಲಿದ್ದಾಗ ಮಿಸ್ಟೀರಿಯಸ್ ಫಾರೆಸ್ಟ್ ಮತ್ತು ಸಾಂಗ್ ಆಫ್ ದಿ ರಿವರ್ ಕಾದಂಬರಿಗಳನ್ನು ಪ್ರಕಟಿಸಲಾಯಿತು. ಸಿನಾಶಾ ಅವರ ತಂದೆ ಎ.ಶ್ರೀಕುಮಾರ್ ವೃತ್ತಿಯಲ್ಲಿ ಶಿಕ್ಷಕರು. ಮಗಳ ಸಾಧನೆ ಅವರಿಗೆ ಹೆಮ್ಮೆ ತರಿಸಿದೆ. ಕಾದಂಬರಿಗಳಲ್ಲಿ ಅವಳ ಕನಸುಗಳು ಮತ್ತು ಪಾತ್ರಗಳೇ ತುಂಬಿವೆ. ಬರವಣಿಗೆ ತುಂಬಾ ವಿಶೇಷವಾಗಿದೆ.
ಬರವಣಿಗೆಯ ಜೊತೆಗೆ ಚಿತ್ರಕಲೆಯ ಬಗ್ಗೆಯೂ ಹೆಚ್ಚು ಒಲವು ಹೊಂದಿರುವ ಸಿನಾಶಾ, ತನ್ನ ಕಾದಂಬರಿಗಳ ಮುಖ್ಯಪುಟದಲ್ಲಿ ಸ್ವತಃ ದೃಶ್ಯೀಕರಿಸಿದ್ದಾರೆ ಮತ್ತು ಸಿದ್ಧಪಡಿಸಿದ್ದಾರೆ. ಕೈಗೊಂಡ ಪ್ರವಾಸ ಮತ್ತು ನೋಡಿದ ಚಲನಚಿತ್ರಗಳ ಬಗ್ಗೆ ಅವಳು ಜರ್ನಲ್ ಮುಂದುವರಿಸಿದ್ದಾಳೆ. ಸಿನಾಶ ಪ್ರಸ್ತುತ ಮೂರು ಕಾದಂಬರಿಗಳಲ್ಲಿ (ಒಂದು ಮಲಯಾಳ ಮತ್ತು ಎರಡು ಇಂಗ್ಲಿಷ್) ಕೆಲಸ ಮುಂದುವರೆಸಿದ್ದಾಳೆ.