ETV Bharat / bharat

ಭಾರತ-ಚೀನಾ 'ಗಡಿ'ಬಿಡಿ ಬಗೆಹರಿಸಲು ಮುಹೂರ್ತ: ಜೂ.6ಕ್ಕೆ ಲೆಫ್ಟಿನೆಂಟ್‌ ಜನರಲ್‌ ಮಟ್ಟದ ಸಭೆ

ಪೂರ್ವ ಲಡಾಖ್‌ ಸಮೀಪದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಉಂಟಾಗಿರುವ ಭಾರತ-ಚೀನಾ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಬಗೆಹರಿಸಿಕೊಳ್ಳಲು ಉಭಯ ದೇಶಗಳ ಸೇನೆಗಳು ಮುಂದಾಗಿವೆ. ಜೂನ್‌ 6 ರಂದು ಲೆಫ್ಟಿಲೆಂಟ್‌ ಜನರಲ್‌ ಶ್ರೇಣಿ ಅಧಿಕಾರಿ ಮಟ್ಟದಲ್ಲಿ ಉಭಯ ಸೇನಾಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

author img

By

Published : Jun 3, 2020, 3:44 PM IST

after-border-brawls-india-china-scale-up-talks-to-rare-lt-gen-level-at-chulshul
ಭಾರತ-ಚೀನಾ 'ಗಡಿ' ಮಾತುಕತೆಗೆ ಮುಹೂರ್ತ ಫಿಕ್ಸ್‌; ಜೂ.6ಕ್ಕೆ ಲೆಫ್ಟಿನೆಂಟ್‌ ಜನರಲ್‌ ಮಟ್ಟದ ಸಭೆ

ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಉಂಟಾಗಿರುವ ಬಿಗುವಿನ ಪರಿಸ್ಥಿತಿಯನ್ನು ಬಗೆಹರಿಸಿಕೊಳ್ಳಲು ಉಭಯ ದೇಶಗಳ ಸೇನಾ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸೇನಾ ಹಿರಿಯ ಅಧಿಕಾರಿಯೊಬ್ಬರು, ವಿಶ್ವದಲ್ಲೇ ಬಲಿಷ್ಠ ಸೇನಾ ಬಲವನ್ನು ಹೊಂದಿರುವ ಈ ಎರಡು ರಾಷ್ಟ್ರಗಳ ನಿಯೋಗಗಳು ಪೂರ್ವ ಲಡಾಖ್‌ನ ಸ್ಪಾಂಗೂರ್‌‌ ಸಮೀಪದ ಚುಶೂಲ್‌ನಲ್ಲಿ ಸೇನಾಧಿಕಾರಿಗಳು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಲೆಫ್ಟಿನೆಂಟ್‌ ಜನರಲ್‌ ಶ್ರೇಣಿಯ ಅಧಿಕಾರಿಗಳು ಇದರ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಉಭಯ ದೇಶಗಳ ಗಡಿಯಲ್ಲಿ ಹಿಂದೆಯೂ ಇಂತಹ ಪರಿಸ್ಥಿತಿ ಉಂಟಾಗಿರಲಿಲ್ಲ ಎಂದು ಸೇನಾ ಹಿರಿಯ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಜೂನ್‌ 6 ರಂದು ನಡೆಯಲಿರುವ ಮಾತುಕತೆಯಲ್ಲಿ ಗಡಿಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಮೊದಲ ಆದ್ಯತೆ ನೀಡಲಾಗಿದೆ.

ಸಾವಿರಾರು ಸೈನಿಕರು, ಭಾರಿ ಗಾತ್ರದ ವಾಹನಗಳು, ಫಿರಂಗಿಗಳನ್ನು ಚೀನಾ ಗಡಿ ಸಮೀಪದಲ್ಲಿ ಜಮಾವಣೆ ಮಾಡಿರುವುದು ಆತಂಕಕ್ಕೆ ಕಾರಣವಾಗಿತ್ತು. 2013ರ ಗಡಿ ರಕ್ಷಣಾ ಸಹಕಾರ ಒಪ್ಪಂದ (ಬಿಡಿಸಿಎ) ಪ್ರಕಾರ ಲೆಫ್ಟಿನೆಂಟ್‌ ಜನರಲ್‌ ಶ್ರೇಣಿಯ ಅಧಿಕಾರಿಗಳು ಒಬ್ಬರಿಗೊಬ್ಬರು ಉಭಯ ಸೇನೆಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗಿದೆ.

2020ರ ಜನವರಿ 8,9 ರಂದು ಬೀಜಿಂಗ್‌ನಲ್ಲಿ ಉತ್ತರ ಕಮಾಂಡೆಂಟ್‌ ಲೆ.ಜ.ರಣ್ಭೀರ್‌ ಸಿಂಗ್‌ ಅವರು ಪಿಎಲ್‌ಎ ಜನರಲ್‌ ಹಾನ್‌ ವಿಂಗೊವೊ ಮತ್ತು ಜನರಲ್‌ ಝೋ ಝಾಂಗ್ಗಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.