ETV Bharat / bharat

ಲಾಕ್​ಡೌನ್ ವೇಳೆ ಆರ್ಥಿಕ ಸಹಾಯ ಕೋರಿ ಸುಪ್ರೀಂ ಮುಖ್ಯ ನ್ಯಾಯಮೂರ್ತಿಗೆ ವಕೀಲರ ಪತ್ರ - ವಕೀಲರಿಗೆ ಆರ್ಥಿಕ ಸಹಾಯ ಕೋರಿ ಸಿಜೆಐಗೆ ಪತ್ರ ಸುದ್ದಿ

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ಅವರಿಗೆ ಬಾರ್ ಕೌನ್ಸಿಲ್‌ ಸದಸ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ತುರ್ತು ನಿಧಿಯನ್ನು ರಚಿಸುವಂತೆ ಪತ್ರ ಬರೆದಿದ್ದಾರೆ.

Advocates write to CJI
ವಕೀಲರಿಗೆ ಆರ್ಥಿಕ ಸಹಾಯ ಕೋರಿ ಸಿಜೆಐಗೆ ಪತ್ರ
author img

By

Published : Apr 8, 2020, 9:01 PM IST

ನವದೆಹಲಿ : ದೇಶಾದ್ಯಂತ ಬಾರ್ ಕೌನ್ಸಿಲ್ ಸದಸ್ಯರು ಎದುರಿಸುತ್ತಿರುವ ಸಮಸ್ಯೆ ಕುರಿತು ಅಡ್ವೊಕೇಟ್ ಪವನ್ ಪ್ರಕಾಶ್ ಪಾಠಕ್ ಮತ್ತು ಅಲೋಕ್ ಸಿಂಗ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ, ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಮತ್ತು ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್​ಗೆ ಪತ್ರ ಬರೆದಿದ್ದಾರೆ. ಕೊರೊನಾ ಕಾರಣ ಹಣಕಾಸಿನ ಸಂಕಷ್ಟ ಎದುರಾಗಿರುವುದಾಗಿ ಅವರು ತಿಳಿಸಿದ್ದಾರೆ.

"ಒಂದು ನಿರ್ದಿಷ್ಟ ಅವಧಿಗೆ ಸಾಲ ವಿತರಣೆಯ ರೂಪದಲ್ಲಿ ಧನ ಸಹಾಯವನ್ನು ನಿಗದಿತ ಅವಧಿಯ ನಂತರ ಸಹಾಯದ ಹಣವನ್ನು ಹಿಂದಿರುಗಿಸುವ ಅವಕಾಶವನ್ನು ವಕೀಲರಿಗೆ ಒದಗಿಸಬೇಕು. ಒಮ್ಮೆ ನ್ಯಾಯಾಲಯವು ಸಮಂಜಸವಾದ ಬಡ್ಡಿಯೊಂದಿಗೆ ತುರ್ತು ನಿಧಿಯನ್ನು ವಿತರಿಸಬಹುದು. ವಿವಿಧ ರಾಜ್ಯಗಳ ಬಾರ್ ಅಸೋಸಿಯೇಷನ್‌ಗಳು ಅಥವಾ ಬಿಸಿಐ ಇದನ್ನು ಕಾನೂನು ನೆರವು ಅಥವಾ ಯಾವುದೇ ಮಾನವಕುಲದ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು"ಎಂದು ಪತ್ರವನ್ನು ಬರೆದಿದ್ದಾರೆ.

ಹಣಕಾಸಿನ ಸಹಾಯಕ್ಕಾಗಿ ಆಧಾರಗಳನ್ನು ಉಲ್ಲೇಖಿಸಿ, ವಕೀಲರು ಲಾಕ್‌ಡೌನ್‌ನಿಂದ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ದಾವೆಗಳ ಮೂಲಕ ಮಾತ್ರ ತಮ್ಮ ಜೀವನೋಪಾಯವನ್ನು ಗಳಿಸುವ ವಕೀಲರಿದ್ದಾರೆ. ಇಂಥವರ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದಕ್ಕಾಗಿ ನಿಧಿಯೊಂದನ್ನು ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿವಿಧ ಬಾರ್ ಅಸೋಸಿಯೇಷನ್‌ಗಳು ಹಣಕಾಸಿನ ನೆರವಿನೊಂದಿಗೆ ಬರುತ್ತಿದ್ದರು ಸಹ ಆ ನೀತಿಗಳಲ್ಲಿ ಯಾವುದೇ ಏಕರೂಪತೆ ಮತ್ತು ಸಮಾನತೆಯಿಲ್ಲ. ಆದ್ದರಿಂದ ಅಗತ್ಯವಿರುವ ಎಲ್ಲ ವಕೀಲರು ಸಹಾಯ ಪಡೆಯುತ್ತಿಲ್ಲ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.