ನವದೆಹಲಿ: ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಬೋರ್ಡ್ ಪರೀಕ್ಷೆಗಳನ್ನು ಕೇವಲ 29 ಮುಖ್ಯ ವಿಷಯಗಳಿಗೆ ಮಾತ್ರ ನಡೆಸುವಂತೆ ಕೇಂದ್ರ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಸಿಬಿಎಸ್‌ಇಗೆ ಸಲಹೆ ನೀಡಿದ್ದಾರೆ.
ಉಳಿದ ವಿಷಯಗಳಿಗೆ ಸಿಬಿಎಸ್‌ಇ ಪರೀಕ್ಷೆಗಳನ್ನು ನಡೆಸುವುದಿಲ್ಲ. ಈ ನಿರ್ಧಾರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವಲ್ಲಿ ನಿರ್ಣಾಯಕವಾಗಿದೆ ಎಂದು ರಮೇಶ್ ತಿಳಿಸಿದ್ದಾರೆ. ಸದ್ಯ ಕೊರೊನಾ ವೈರಸ್ ದೇಶವ್ಯಾಪಿ ಹರಡಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಸರ್ಕಾರ ಬಂದಿದೆ.