ETV Bharat / bharat

ಅತ್ಯಾಚಾರ ಆರೋಪ ಪ್ರಕರಣ: ನಟ ಆದಿತ್ಯ ಪಾಂಚೋಲಿಗೆ ತಾತ್ಕಾಲಿಕ ರಿಲೀಫ್​​​​​ - kannada news

ಬಾಲಿವುಡ್‌ ನಟಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನಟ ಆದಿತ್ಯ ಪಾಂಚೋಲಿಗೆ ನಿರೀಕ್ಷಣಾ ಜಾಮೀನು ದೊರೆತಿದೆ.

ನಟ ಆದಿತ್ಯ ಪಾಂಚೋಲಿ
author img

By

Published : Jul 2, 2019, 11:16 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್‌ನ ಪ್ರಮುಖ ನಟಿಯೊಬ್ಬರ ಮೇಲಿನ ಅತ್ಯಾಚಾರ ಆರೋಪ ಪ್ರಕರಣಲ್ಲಿ ನಟ ಆದಿತ್ಯ ಪಾಂಚೋಲಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡ ನಾಲ್ಕು ದಿನಗಳ ನಂತರ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ದಿಂದೊಶಿ ಸೆಷನ್ಸ್​ ಕೋರ್ಟ್, ಪಾಂಚೋಲಿಗೆ ಜುಲೈ 19ರವರೆಗೆ ರಿಲೀಫ್​​​ ನೀಡಿದೆ.

ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಮೇಲೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತಿತರ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. 54 ವರ್ಷದ ನಟ ಪಂಚೋಲಿ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದು, ಈ ಪ್ರಕರಣದಲ್ಲಿ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.