ಅಹ್ಮದ್ ನಗರ: ಇಲ್ಲಿನ ಕಾನ್ಸರ್ ಸೊಸೈಟಿ ,ಆನಂದಿಬೇನ್ ಪೌಂಡೇಷನ್ ಮತ್ತು ಮ್ಯಾಕ್ ಕೇರ್ ಆಸ್ಪತ್ರೆ ಕಾನ್ಸರ್ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಮಹಿಳೆಯರಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಹಾಗೂ ಅದರ ತಡೆಗಟ್ಟುವ ಕುರಿತಂತೆ ಜಾಗೃತಿ ಹಾಗೂ ಅದಕ್ಕೆ ಇರುವ ಚಿಕಿತ್ಸೆ ಕುರಿತಂತೆ ಜಾಗೃತಿ ಮೂಡಿಸಿತು.
ವಿಶೇಷ ಎಂದರೆ ಕಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಯಶಸ್ವಿ ಚಿಕಿತ್ಸೆ ಪಡೆದು ಸಹಜ ಜೀವನಕ್ಕೆ ಮರಳಿರುವ ನಟಿ ಮನೀಷಾ ಕೊಯಿರಾಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮನೀಷಾ ಕೊಯಿರಾಲ, ಮಹಿಳೆಯರು ಮತ್ತು ಇತರರನ್ನು ಉದ್ದೇಶಿಸಿ ಮಾತನಾಡಿದ ಕೊಯಿರಾಲಾ ತಾವು ಅನುಭವಿಸಿದ ನೋವು, ಅದರಿಂದ ಪಾರಾದ ಬಗೆಯನ್ನ ಜನರಿಗೆ ವಿವರಿಸಿ ಧೈರ್ಯ ತುಂಬಿದರು.
ಮಹಾಮಾರಿಯನ್ನ ಗೆಲ್ಲುವ ಬಗೆ ವಿವರಿಸಿದ ಅವರು ಅಲ್ಲಿ ನೆರದಿದ್ದ ಜನರಲ್ಲಿ ಆತ್ಮವಿಶ್ವಾಸ ತುಂಬಿದರು.