ETV Bharat / bharat

ಬಿಜೆಪಿಗೆ ಪಾಕ್​​​ ಮೇಲೆ ಇನ್ನಿಲ್ಲದ ಪ್ರೀತಿ... ಅವರಿಗೇ 'ಪದ್ಮಶ್ರೀ' ನೀಡಿ ಎಂದ ನಟಿ!

author img

By

Published : Feb 3, 2020, 12:44 PM IST

Updated : Feb 3, 2020, 1:17 PM IST

ಸಂವಿಧಾನ ಉಳಿಸಿ, ದೇಶವನ್ನು ರಕ್ಷಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರುವ ಬಾಲಿವುಡ್​ ನಟಿ ಸ್ವರ ಭಾಸ್ಕರ್​ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Actor Swara Bhasker
ಬಾಲಿವುಡ್​ ನಟಿ ಬಾಸ್ಕರ್

ಇಂದೋರ್​​: ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಪಾಕಿಸ್ತಾನದ ಮೇಲೆ ಇನ್ನಿಲ್ಲದ ಪ್ರೀತಿ. ಹೀಗಾಗಿ ಪಾಕಿಸ್ತಾನಿಗಳಿಗೇ ಪದ್ಮಶ್ರೀ ನೀಡಿ ಎಂದು ನಟಿ ಸ್ವರ ಭಾಸ್ಕರ್​​​​ ಆಕ್ರೋಶದ ಮಾತುಗಳನ್ನಾಡಿದ್ದಾರೆ.

ಸಂಗೀತ ಕಾರ್ಯಕ್ರಮಕ್ಕೆಂದು ಭಾರತಕ್ಕೆ ಅಗಮಿಸಿ 2016ರಲ್ಲಿ ಭಾರತೀಯ ಪೌರತ್ವ ಪಡೆದುಕೊಂಡಿರುವ ಅದ್ನಾನ್ ಸಾಮಿ ಅವರಿಗೆ ಕೇಂದ್ರ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಈ ಕ್ರಮ ಖಂಡಿಸಿರುವ ಬಾಲಿವುಡ್​​ ನಟಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಗೆ ಪಾಕ್​ ಮೇಲೆ ಹೆಚ್ಚಿನ ಪ್ರೀತಿ ಇರುವ ಕಾರಣ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಇನ್ಮುಂದೆ ಪಾಕಿಸ್ತಾನದಲ್ಲಿ ನೆಲೆಸಿರುವ ವ್ಯಕ್ತಿಗಳಿಗೂ ಈ ಪ್ರಶಸ್ತಿ ನೀಡಿ ಎಂದು ನಟಿ ಸ್ವರ ಭಾಸ್ಕರ್​ ಹೇಳಿದ್ದಾರೆ. ಮಧ್ಯಪ್ರದೇಶದ ಇಂದೋರ್​​ನಲ್ಲಿ ಸಂವಿಧಾನವನ್ನು ಉಳಿಸಿ, ದೇಶವನ್ನು ರಕ್ಷಿಸಿ ರ್ಯಾಲಿಯಲ್ಲಿ ಭಾಗಿಯಾಗಿ ಅವರು ಮಾತನಾಡಿದ್ದಾರೆ.

ಇದೇ ವಿಷಯವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ದಿಗ್ವಿಜಯ್​ ಸಿಂಗ್​​, ಪಾಕಿಸ್ತಾನದ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಅದ್ನಾನ್ ಸಾಮಿ ಅವರ ತಂದೆ ಭಾರತದ ಮೇಲೆ ಬಾಂಬ್​​ ಎಸೆದಿದ್ದರು. ಆದರೆ, ಇದೀಗ ಬಾಂಬ್​​ ಎಸೆದವನ ಮಗನಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ ಎಂದು ಟೀಕಿಸಿದ್ದಾರೆ.

Last Updated : Feb 3, 2020, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.