ETV Bharat / bharat

ಗಾಂಧೀಜಿ ಅವರ ಆ ಮಾರ್ಗ ಹೋರಾಟದ ಯಶಸ್ಸಿಗೆ ಕಾರಣವಾಗಿದ್ಯಾಕೆ?: ಇಂದು ಆ ಅಸ್ತ್ರ ಎಷ್ಟು ಪ್ರಸ್ತುತ!

ಮಹಾತ್ಮಾ ಗಾಂಧೀಜಿ ಜನರ ನಡುವೆ ಒಂದಾಗುತ್ತಿದ್ದರು. ಅವರಂತೆ ಉಡುಪು ಧರಿಸಿ, ಅವರಂತಯೇ ಜೀವನ ನಡೆಸಿ, ಜನರ ಕಷ್ಟಗಳಿಗೆ ಸ್ಪಂದಿಸಿ ಅವರ ಗೌರವಕ್ಕೆ ಪಾತ್ರರಾದರು. ಹಿಂಸಾಚಾರವಿಲ್ಲದೇ ಅಹಿಂಸೆಯನ್ನೇ ಅಸ್ತ್ರವಾಗಿಸಿ ಸತ್ಯಾಗ್ರಹದೊಂದಿಗೆ ಬ್ರಿಟಿಷರ ಆಡಳಿತ ಅಂತ್ಯಗೊಳಿಸಿದ್ದರು. ಸಮಸ್ಯೆಗಳನ್ನು ಬಗೆಹರಿಸಲು ಗಾಂಧಿ ಮಾದರಿಯ ಪರಿಹಾರಗಳನ್ನು ನಾವು ಮರೆತಿರುವ ಕಾರಣ ಸಂಘರ್ಷಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಗಾಂಧಿ ತತ್ತ್ವವನ್ನು ಅನುಸರಿಸುವ ಅಗತ್ಯವಿದೆ.

gandhi
author img

By

Published : Sep 5, 2019, 5:00 AM IST

Updated : Sep 5, 2019, 6:25 AM IST

ಪ್ರಪಂಚದಲ್ಲಿ ಅನೇಕ ನಾಯಕರು ಗಾಂಧೀಜಿಗಿಂತ ಅದ್ಭುತವಾಗಿ ಹೋರಾಟ ನಡೆಸಿದ್ದಾರೆ. ಕೆಲವರು ಕ್ರಾಂತಿಕಾರಿ ನಡೆಗಳಿಂದಲೇ ಪ್ರಭಾವ ಬೀರಿದ್ದಾರೆ. ಆದರೆ ಮಹಾತ್ಮ ಗಾಂಧೀಜಿ ಹಿಂಸಾಚಾರವಿಲ್ಲದೇ ಅಹಿಂಸೆಯ ಅಸ್ತ್ರ ಮತ್ತು ಸತ್ಯಾಗ್ರಹದೊಂದಿಗೆ ಬ್ರಿಟಿಷರ ಆಡಳಿತ ಅಂತ್ಯಗೊಳಿಸಿದ್ದು ಚಮತ್ಕಾರವೇ ಸರಿ.

ಹೌದು, ಸ್ವಾತಂತ್ರ್ಯ ಪಡೆಯಲು ಜನರನ್ನು ಅವರು ಸತ್ಯಾಗ್ರಹ ಎಂಬ ಅಂಶದಿಂದಲೇ ಪ್ರಚೋದಿಸಿದರು. ಅವರಲ್ಲಿ ಸಾಕ್ರಟಿಸ್​ನ ಬುದ್ಧಿವಂತಿಕೆ, ಸಂತ ಫ್ರಾನ್ಸಿಸ್​ನ ನಮ್ರತೆ, ಬುದ್ಧನ ಮಾನವೀಯತೆ, ಪ್ರಾಚೀನ ಮುನಿಗಳ ಪಾವಿತ್ರ್ಯತೆ ಇತ್ತು. ಅವರೊಬ್ಬ ಉತ್ತಮ ನಾಯಕರಾಗಿದ್ದರು. ಭಾರತದ ಸ್ವಾತಂತ್ರ್ಯದ ಕನಸು ಕಂಡ ಗಾಂಧೀಜಿ, ರಕ್ತಪಾತವಿಲ್ಲದೇ ಅದನ್ನು ಸಾಧಿಸಿದ್ದರು. ಬಾಪೂ ಉತ್ತಮ ಸಂವಹನಕಾರರಾಗಿದ್ದರಿಂದ ಲಕ್ಷಾಂತರ ಜನರಿಂದ ಅವರಿಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿತ್ತು.

ಮಹಾತ್ಮಾ ಗಾಂಧೀಜಿ ಜನರ ನಡುವೆ ಒಂದಾಗುತ್ತಿದ್ದರು. ಅವರಂತೆ ಉಡುಪು ಧರಿಸಿ, ಅವರಂತಯೇ ಜೀವನ ನಡೆಸಿ, ಜನರ ಕಷ್ಟಗಳಿಗೆ ಸ್ಪಂದಿಸಿ ಅವರ ಗೌರವಕ್ಕೆ ಪಾತ್ರರಾದರು. ಬಾಪೂಜಿ ಬೋಧನೆಗಳು ಭಾರತಕ್ಕೆ ಮಾತ್ರವಲ್ಲದೇ, ಪ್ರಪಂಚಕ್ಕೇ ಪ್ರಸ್ತುತವಾಗಿವೆ. ಅವರು ತಮ್ಮ ಆಲೋಚನೆಗಳು, ಮಾತು ಹಾಗೂ ಕಾರ್ಯರೂಪದಲ್ಲಿ ಪರಿಪೂರ್ಣರಾಗಿದ್ದರು. ನನ್ನ ಜೀವನವೇ ನನ್ನ ಸಂದೇಶ ಎಂದು ಅವರು ಹಲವು ಬಾರಿ ಹೇಳಿದ್ದರು.

gandhi
ನನ್ನ ಜೀವನವೇ ನನ್ನ ಸಂದೇಶ ಎಂದು ಬಾಪೂ ಹೇಳುತ್ತಿದ್ದರು

ಇತ್ತೀಚಿನ ದಿನಗಳಲ್ಲಿ ಸಂಘರ್ಷಗಳು ಹೆಚ್ಚಾಗಿವೆ. ವೈಯಕ್ತಿಕ, ಜನಾಂಗೀಯ, ಜಾತಿ, ರಾಜಕೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷಗಳು ನಡೆಯುತ್ತಿವೆ. ಎರಡು ಗುಂಪುಗಳ ನಡುವೆ ನಡೆಯುವ ಈ ಸಂಘರ್ಷಗಳಲ್ಲಿ ಪರಸ್ಪರರಿಗೆ ಹಾನಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಸಮಸ್ಯೆಗಳನ್ನು ಬಗೆಹರಿಸಲು ಗಾಂಧಿ ಮಾದರಿಯ ಪರಿಹಾರಗಳನ್ನು ನಾವು ಮರೆತಿರುವ ಕಾರಣ ಸಂಘರ್ಷಗಳು ದಿನೇ ದಿನೆ ಹೆಚ್ಚಾಗುತ್ತಿವೆ.

20ನೇ ಶತಮಾನದ ಬಳಿಕ ಜಗತ್ತಿನಲ್ಲಿ ಹಿಂಸೆ ಅಧಿಕವಾಗುತ್ತಾ ಬಂದಿದೆ. 2ನೇ ಮಹಾಯುದ್ಧದ ಸಂದರ್ಭದಲ್ಲಿ ಅಂದರೆ 1945ರಲ್ಲಿ ಹಿರೋಶಿಮಾ ಹಾಗೂ ನಾಗಾಸಾಕಿಯಲ್ಲಿ ನಡೆದ ಅಣು ಬಾಂಬ್ ದಾಳಿಯ ಬಳಿಕ ಪರಮಾಣು ಸಶಸ್ತ್ರ ಪಡೆ ಹೊಂದಿರುವ ದೇಶಗಳ ನಡುವೆ 3ನೇ ಮಹಾಯುದ್ಧ ಸಂಭವಿಸುವ ಆತಂಕ ಅಧಿಕವಾಗುತ್ತಾ ಬಂದಿದೆ.

ಪ್ರಥಮ ಹಾಗೂ ದ್ವಿತೀಯ ಮಹಾಯುದ್ಧವನ್ನು ಹೊರತುಪಡಿಸಿ, ವಿಶ್ವದೆಲ್ಲೆಡೆ ನಡೆದ ಇತರ 250 ಯುದ್ಧಗಳಲ್ಲಿ 50 ಮಿಲಿಯನ್​ನಷ್ಟು ಜನ ಸಾವನ್ನಪ್ಪಿದ್ದಾರೆ. ಪ್ರಸ್ತುತ 40ಕ್ಕೂ ಅಧಿಕ ಸಂಘರ್ಷಗಳು ಪ್ರಪಂಚದೆಲ್ಲೆಡೆ ನಡೆಯುತ್ತಿವೆ. ಹಿಂಸೆಯ ನೆರಳಿನಲ್ಲಿಯೇ ನಾವು ಜೀವನ ನಡೆಸುತ್ತಿದ್ದು, ಈ ಭೂಮಿಯಲ್ಲಿ ಯಾವುದೇ ಜೀವ ಕೂಡಾ ಸುರಕ್ಷಿತವಾಗಿಲ್ಲ.

gandhi
ವಿವಾದಗಳನ್ನು ಬಗೆಹರಿಸಲು ಗಾಂಧಿ ಮೌಲ್ಯಯುತ ಮಾರ್ಗ ಬೋಧಿಸದರು

ಜಗತ್ತಿನ ಎಲ್ಲ ದೇಶಗಳ ಮಿಲಿಟರಿ ಖರ್ಚು ಒಟ್ಟಾರೆಯಾಗಿ 1,822 ಬಿಲಿಯನ್​ ಡಾಲರ್​ ಆಗಿದೆ. ಯುಎಸ್​ಎ, ಚೀನಾ ಹಾಗೂ ಸೌದಿ ಅರೇಬಿಯಾದ ಬಳಿಕ ಮಿಲಿಟರಿ ಖರ್ಚಿನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ 66.5 ಬಿಲಿಯನ್​ ಡಾಲರ್​ನಷ್ಟು ಹಣವನ್ನು ಮಿಲಿಟರಿಗಾಗಿ​ ವ್ಯಯಿಸುತ್ತಿದೆ. ವಿಶ್ವದೆಲ್ಲೆಡೆ ರಾಷ್ಟ್ರೀಯ ಭದ್ರತೆ, ಮಿಲಿಟರಿ ಅಗತ್ಯತೆ ಭಯೋತ್ಪಾದನಾ ನಿಗ್ರಹಕ್ಕಾಗಿ ಮಾನವ ಸಂಪನ್ಮೂಲಗಳ ಬಳಕೆಯಾಗುತ್ತಿರುವುದರಿಂದ, ಆರೋಗ್ಯ, ಶಿಕ್ಷಣ ಹಾಗೂ ವಸತಿಯಂತಹ ಅಗತ್ಯತೆಗಳ ಅಭಿವೃದ್ಧಿ ಕುಂಠಿತವಾಗಿದೆ. ಇಷ್ಟು ಮಾತ್ರವಲ್ಲದೇ ನಾಗರಿಕರು ತಮ್ಮ ರಕ್ಷಣೆಗಾಗಿ ಬಂದೂಕುಗಳನ್ನು ಹೊಂದಿದ್ದಾರೆ. ಜಗತ್ತಿನಲ್ಲಿರುವ ಶೇಕಡಾ 85 ರಷ್ಟು ಬಂದೂಕುಗಳು ನಾಗರಿಕರ ಕೈಯಲ್ಲಿವೆ.

ಇಂತಹ ಪರಿಸ್ಥಿತಿಯಲ್ಲಿ ನಾವು ಗಾಂಧಿ ತತ್ತ್ವವನ್ನು ಅನುಸರಿಸುವ ಅಗತ್ಯವಿದೆ. ಗಾಂಧಿ ತತ್ವಗಳು ಶಾಂತಿಯನ್ನು ಪ್ರತಿಪಾದಿಸುತ್ತವೆ. ದೇಶಗಳ ನಡುವೆ ಸೌಹಾರ್ದತೆ ಬೆಳೆದು, ಯುದ್ಧಗಳು ಸ್ಥಗಿತಗೊಳ್ಳಬೇಕೆಂಬುವುದೇ ಗಾಂಧೀಜಿ ಪ್ರತಿಪಾದನೆಯಾಗಿತ್ತು. ಅಂತಾರಾಷ್ಟ್ರೀಯ ವಿವಾದಗಳನ್ನು ಬಗೆಹರಿಸಲು ಅವರು ಮೌಲ್ಯಯುತ ಮಾರ್ಗವನ್ನು ಅನುಸರಿಸುವಂತೆ ಸೂಚಿಸಿದ್ದರು. ಅಶಾಂತಿಯೇ ಸಾಮಾಜಿಕ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ಷೇತ್ರಗಳಲ್ಲಿನ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ಗಾಂಂಧೀಜಿ ಹೇಳುತ್ತಿದ್ದರು. ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಕ್ಕೆ ಅವರಿಗೆ ಗೌರವ ಸಲ್ಲಿಸಲು ಗಾಂಧಿ ತತ್ತ್ವಗಳು ಹಾಗೂ ಆದರ್ಶಗಳನ್ನು ವಿಮರ್ಶಿಸೋಣ. ಅವರಂತೆ ಯೋಚಿಸಿ ನಡೆಯಬೇಕಾದ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ.

Intro:Body:

ಗಾಂಧೀಜಿ ಅವರ ಆ ಮಾರ್ಗ ಹೋರಾಟದ ಯಶಸ್ಸಿಗೆ ಕಾರಣವಾಗಿದ್ಯಾಕೆ.?: ಇಂದು ಆ ಅಸ್ತ್ರ ಎಷ್ಟು ಪ್ರಸ್ತುತ!

ಪ್ರಪಂಚದಲ್ಲಿ ಅನೇಕ ನಾಯಕರು ಗಾಂಧೀಜಿಗಿಂತ ಅದ್ಭುತವಾಗಿ ಹೋರಾಟ ನಡೆಸಿದ್ದಾರೆ. ಕೆಲವರು ಕ್ರಾಂತಿಕಾರಿ ನಡೆಗಳಿಂದಲೇ ಪ್ರಭಾವ ಬೀರಿದ್ದಾರೆ. ಆದರೆ ಮಹಾತ್ಮ ಗಾಂಧೀಜಿ ಹಿಂಸಾಚಾರವಿಲ್ಲದೇ ಯುದ್ಧವನ್ನೇ ಮಾಡದೆ ಹಾಗೂ ಸತ್ಯಾಗ್ರಹದೊಂದಿಗೆ ಬ್ರಿಟಿಷರ ಆಡಳಿತ ಅಂತ್ಯಗೊಳಿಸಿದ್ದು ಚಮತ್ಕಾರವೇ ಸರಿ.  ಸ್ವಾತಂತ್ರ್ಯ ಪಡೆಯಲು ಜನರನ್ನು ಅವರು ಸತ್ಯಾಗ್ರಹ ಎಂಬ ಅಂಶದಿಂದಲೇ ಪ್ರಚೋದಿಸಿದರು.  ಅವರಲ್ಲಿ ಸಾಕ್ರಟಿಸ್​ನ ಬುದ್ಧಿವಂತಿಕೆ, ಸಂತ ಫ್ರಾನ್ಸಿಸ್​ನ ನಮ್ರತೆ, ಬುದ್ಧನ ಮಾನವೀಯತೆ, ಪ್ರಾಚೀನ ಮುನಿಗಳ ಪಾವಿತ್ರ್ಯತೆ ಇತ್ತು. ಅವರೊಬ್ಬ ಉತ್ತಮ ನಾಯಕರಾಗಿದ್ದರು. ಭಾರತದ ಸ್ವಾತಂತ್ರ್ಯದ ಕನಸು ಕಂಡ ಗಾಂಧೀಜಿ, ರಕ್ತಪಾತವಿಲ್ಲದೇ ಅದನ್ನು ಸಾಧಿಸಿದ್ದರು. ಬಾಪೂ ಉತ್ತಮ ಸಂವಹನಕಾರರಾಗಿದ್ದರಿಂದ ಲಕ್ಷಾಂತರ ಜನರಿಂದ ಅವರಿಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿತ್ತು.

ಮಹಾತ್ಮಾ ಗಾಂಧೀಜಿ ಜನರ ನಡುವೆ ಒಂದಾಗುತ್ತಿದ್ದರು. ಅವರಂತೆ ಉಡುಪು ಧರಿಸಿ, ಅವರಂತಯೇ ಜೀವನ ನಡೆಸಿ, ಜನರ ಕಷ್ಟಗಳಿಗೆ ಸ್ಪಂದಿಸಿ ಅವರ ಗೌರವಕ್ಕೆ ಪಾತ್ರರಾದರು. ಬಾಪೂಜಿ ಬೋಧನೆಗಳು ಭಾರತಕ್ಕೆ ಮಾತ್ರವಲ್ಲದೇ, ಪ್ರಪಂಚಕ್ಕೇ ಪ್ರಸ್ತುತವಾಗಿವೆ. ಅವರು ತಮ್ಮ ಆಲೋಚನೆಗಳು, ಮಾತು ಹಾಗೂ ಕಾರ್ಯರೂಪದಲ್ಲಿ ಪರಿಪೂರ್ಣರಾಗಿದ್ದರು. ನನ್ನ ಜೀವನವೇ ನನ್ನ ಸಂದೇಶ ಎಂದು ಅವರು ಹಲವು ಬಾರಿ ಹೇಳಿದ್ದರು. 

ಇತ್ತೀಚಿನ ದಿನಗಳಲ್ಲಿ ಸಂಘರ್ಷಗಳು ಹೆಚ್ಚಾಗಿವೆ. ವೈಯಕ್ತಿಕ, ಜನಾಂಗೀಯ, ಜಾತಿ, ರಾಜಕೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷಗಳು ನಡೆಯುತ್ತಿವೆ. ಎರಡು ಗುಂಪುಗಳ ನಡುವೆ ನಡೆಯುವ ಈ ಸಂಘರ್ಷಗಳಲ್ಲಿ ಪರಸ್ಪರರಿಗೆ ಹಾನಿ ಮಾಡಲು ಪ್ರಯತ್ನಿಸುತ್ತಿವೆ. ಸಮಸ್ಯೆಗಳನ್ನು ಬಗೆಹರಿಸಲು ಗಾಂಧಿ ಮಾದರಿಯ ಪರಿಹಾರಗಳನ್ನು ನಾವು ಮರೆತಿರುವ ಕಾರಣ ಸಂಘರ್ಷಗಳು ದಿನೇ ದಿನೆ ಹೆಚ್ಚಾಗುತ್ತಿವೆ. 

20ನೇ ಶತಮಾನದ ಬಳಿಕ ಜಗತ್ತಿನಲ್ಲಿ ಹಿಂಸೆ ಅಧಿಕವಾಗುತ್ತಾ ಬಂದಿದೆ. 2ನೇ ಮಹಾಯುದ್ಧದ ಸಂದರ್ಭದಲ್ಲಿ ಅಂದರೆ 1945ರಲ್ಲಿ ಹಿರೋಶಿಮಾ ಹಾಗೂ ನಾಗಾಸಾಕಿಯಲ್ಲಿ ನಡೆದ ಅಣು ಬಾಂಬ್ ದಾಳಿಯ ಬಳಿಕ ಪರಮಾಣು ಸಶಸ್ತ್ರ ಪಡೆ ಹೊಂದಿರುವ ದೇಶಗಳ ನಡುವೆ 3ನೇ ಮಹಾಯುದ್ಧ ಸಂಭವಿಸುವ ಆತಂಕ ಅಧಿಕವಾಗುತ್ತಾ ಬಂದಿದೆ. 

ಪ್ರಥಮ ಹಾಗೂ ದ್ವಿತೀಯ ಮಹಾಯುದ್ಧವನ್ನು ಹೊರತುಪಡಿಸಿ, ವಿಶ್ವದೆಲ್ಲೆಡೆ ನಡೆದ ಇತರ 250 ಯುದ್ಧಗಳಲ್ಲಿ 50 ಮಿನಿಯನ್​ನಷ್ಟು ಜನ ಸಾವನ್ನಪ್ಪಿದ್ದಾರೆ. ಪ್ರಸ್ತುತ 40ಕ್ಕೂ ಅಧಿಕ ಸಂಘರ್ಷಗಳು ಪ್ರಪಂಚದೆಲ್ಲೆಡೆ ನಡೆಯುತ್ತಿವೆ. ಹಿಂಸೆಯ ನೆರಳಿನಲ್ಲಿಯೇ ನಾವು ಜೀವನ ನಡೆಸುತ್ತಿದ್ದು, ಈ ಭೂಮಿಯಲ್ಲಿ ಯಾವುದೇ ಜೀವ ಕೂಡಾ ಸುರಕ್ಷಿತವಾಗಿಲ್ಲ. 

ಜಗತ್ತಿನ ಎಲ್ಲ ದೇಶಗಳ ಮಿಲಿಟರಿ ಖರ್ಚು ಒಟ್ಟಾರೆಯಾಗಿ 1,822 ಬಿಲಿಯನ್​ ಡಾಲರ್​ ಆಗಿದೆ. ಯುಎಸ್​ಎ, ಚೈನಾ ಹಾಗೂ ಸೌದಿ ಅರೇಬಿಯಾದ ಬಳಿಕ ಮಿಲಿಟರಿ ಖರ್ಚಿನಲ್ಲಿ ನಾಲ್ಕನೆ ಸ್ಥಾನದಲ್ಲಿರುವ ಭಾರತ 66.5 ಬಿಲಿಯನ್​ ಡಾಲರ್​ನಷ್ಟು ಮಿಲಿಟರಿಗಾಗಿ​ ವ್ಯಯಿಸುತ್ತದೆ. ವಿಶ್ವದೆಲ್ಲೆಡೆ ರಾಷ್ಟ್ರೀಯ ಭದ್ರತೆ, ಮಿಲಿಟರಿ ಅಗತ್ಯತೆ ಭಯೋತ್ಪಾದನಾ ನಿಗ್ರಹಕ್ಕಾಗಿ ಮಾನವ ಸಂಪನ್ಮೂಲಗಳ ಬಳಕೆಯಾಗುತ್ತಿರುವುದರಿಂದ, ಆರೋಗ್ಯ, ಶಿಕ್ಷಣ ಹಾಗೂ ವಸತಿಯಂತಹ ಅಗತ್ಯತೆಗಳ ಅಭಿವೃದ್ಧಿ ಕುಂಠಿತವಾಗಿದೆ. ಇಷ್ಟು ಮಾತ್ರವಲ್ಲದೇ ನಾಗರಿಕರು ತಮ್ಮ ರಕ್ಷಣೆಗಾಗಿ ಬಂದೂಕುಗಳನ್ನು ಹೊಂದಿದ್ದಾರೆ. ಜಗತ್ತಿನ 85 ಶೇಕಡಾದಷ್ಟು ಬಂದೂಕುಗಳು ನಾಗರಿಕರ ಕೈಯಲ್ಲಿವೆ.

ಇಂತಹ ಪರಿಸ್ಥಿತಿಯಲ್ಲಿ ನಾವು ಗಾಂಧಿ ತತ್ತ್ವವನ್ನು ಅನುಸರಿಸುವ ಅಗತ್ಯವಿದೆ. ಗಾಂಧಿ ತತ್ತ್ವಗಳು ಶಾಂತಿಯನ್ನು ಪ್ರತಿಪಾದಿಸುತ್ತವೆ. ದೇಶಗಳ ನಡುವೆ ಸೌಹಾರ್ದತೆ ಬೆಳೆದು, ಯುದ್ಧಗಳು ಸ್ಥಗಿತಗೊಳ್ಳಬೇಕೆಂಬುವುದೇ ಗಾಂಧೀಜಿ ಪ್ರತಿಪಾದನೆಯಾಗಿತ್ತು. ಅಂತಾರಾಷ್ಟ್ರೀಯ ವಿವಾದಗಳನ್ನು ಬಗೆಹರಿಸಲು ಅವರು ಮೌಲ್ಯಯುತ ಮಾರ್ಗವನ್ನು ಅನುಸರಿಸುವಂತೆ ಸೂಚಿಸಿದ್ದರು. ಅಶಾಂತಿಯೇ ಸಾಮಾಜಿಕ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ಷೇತ್ರಗಳಲ್ಲಿನ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ಗಾಂಂಧೀಜಿ ಹೇಳುತ್ತಿದ್ದರು. ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಕ್ಕೆ ಅವರಿಗೆ ಗೌರವ ಸಲ್ಲಿಸಲು ಗಾಂಧಿ ತತ್ತ್ವಗಳು ಹಾಗೂ ಆದರ್ಶಗಳನ್ನು ವಿಮರ್ಶಿಸೋಣ. ಅವರಂತೆ ಯೋಚಿಸಿ ನಡೆಯಬೇಕಾದ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ. 

Conclusion:
Last Updated : Sep 5, 2019, 6:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.