ಹೈದರಾಬಾದ್: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಧ್ಯರಾತ್ರಿ ತಹಶೀಲ್ದಾರ್ ಮನೆ ಮೇಲೆ ದಾಳಿ ಮಾಡಿ 93 ಲಕ್ಷ ನಗದು ಮತ್ತು 43 ತೊಲ ಬಂಗಾರ ವಶಪಡಿಸಿಕೊಂಡಿದ್ದಾರೆ.
ಹೈದರಾಬಾದ್ನ ಹಯತ್ನಗರದಲ್ಲಿ ವಾಸ ಮಾಡುತ್ತಿದ್ದ ಕೇಶಂಪೇಟ ತಹಶೀಲ್ದಾರ್ ಲಾವಣ್ಯ ಎಂಬುವವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಬಾರಿ ಮೊತ್ತದ ಹಣ ಮತ್ತು ನಗದು ದೊರಕಿದ್ದು, ಮೇಲ್ನೋಟಕ್ಕೆ ಇವೆಲ್ಲವೂ ಅಕ್ರಮ ಸಂಪಾದನೆ ಎಂದು ಹೇಳಲಾಗುತ್ತಿದೆ.
ಕೇಶಂಪೇಟ ಮೂಲದ ರೈತನ ದೂರು ಆಧರಿಸಿ ಗ್ರಾಮ ಕಂದಾಯ ಅಧಿಕಾರಿಯನ್ನ ವಿಚಾರಣೆ ನಡೆಸಿದಾಗ, ತಹಸೀಲ್ದಾರ್ ಕೂಡ ಲಂಚ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.
ಕಂದಾಯ ಅಧಿಕಾರಿ ಮಾಹಿತಿ ಮೇರೆಗೆ ತಹಶೀಲ್ದಾರ್ ಲಾವಣ್ಯ ಮನೆ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ನಡೆಸಿದ್ದಾರೆ.