ETV Bharat / bharat

ನೀಟ್​​​ನಲ್ಲಿ 720 ಅಂಕ ಗಳಿಸಿದ್ದು ಒಬ್ಬರಲ್ಲ ಇಬ್ಬರು... ಟೈ ಬ್ರೇಕರ್​ನಲ್ಲಿ ದ್ವಿತೀಯ ಸ್ಥಾನ ಪಡೆದ ಆಕಾಂಕ್ಷ! - ಒಡಿಶಾದ ಸೋಯೆಬ್​ ಅಫ್ತಾಬ್

ನೀಟ್ ಪರೀಕ್ಷೆಯ ಫಲಿತಾಂಶ ಹೊರಬಿದ್ದಾಗ ಒಡಿಶಾದ ಅಫ್ತಾಬ್​ 720ಕ್ಕೆ 720 ಅಂಕ ಪಡೆದು ಇತಿಹಾಸ ನಿರ್ಮಿಸಿದ್ದು ಸುದ್ದಿಯಾಗಿತ್ತು. ಆದರೆ ಈತನ ಜೊತೆ ದೆಹಲಿಯ ಆಕಾಂಕ್ಷ ಸಿಂಗ್ ಸಹ 720ಕ್ಕೆ 720 ಅಂಕ ಗಳಿಸಿ ಟೈ ಮಾಡಿಕೊಂಡಿದ್ದರು. ಬಳಿಕ ಟೈ ಬ್ರೇಕರ್ ನಿಯಮದ ಪ್ರಕಾರ ದ್ವಿತೀಯ ಸ್ಥಾನ ನೀಡಲಾಯಿತು.

aakansha-singh-from-kushinagar-is-second-topper-in-neet-2020
ಟೈ ಬ್ರೇಕರ್​ನಲ್ಲಿ ದ್ವಿತಿಯ ಸ್ಥಾನ ಪಡೆದ ಆಕಾಂಕ್ಷ
author img

By

Published : Oct 17, 2020, 1:57 PM IST

ಖುಷಿನಗರ (ನವದೆಹಲಿ): ಶುಕ್ರವಾರ ಬಿಡುಗಡೆಯಾಗಿರುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್​) ಫಲಿತಾಂಶದಲ್ಲಿ ದೆಹಲಿಯ ಆಕಾಂಕ್ಷ ಸಿಂಗ್ 720 ಅಂಕಗಳಿಗೆ 720 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಒಡಿಶಾದ ಸೋಯೆಬ್​ ಅಫ್ತಾಬ್ ಸಹ 720ಕ್ಕೆ 720 ಅಂಕ ಗಳಿಸಿದ್ದರು. ಆದರೆ ಆಕಾಂಕ್ಷ ನಡುವಿನ ಟೈ ಬ್ರೇಕಿಂಗ್ ನೀತಿಯ ಪ್ರಕಾರ ಆಕಾಂಕ್ಷ 2ನೇ ಸ್ಥಾನ ಪಡೆದಿದ್ದಾರೆ. ಅಧಿಕಾರಿಗಳ ಪ್ರಕಾರ, ಟೈ-ಬ್ರೇಕಿಂಗ್ ನೀತಿಯು ವಯಸ್ಸು, ವಿಷಯವಾರು ಅಂಕಗಳು ಮತ್ತು ತಪ್ಪಾದ ಉತ್ತರಗಳ ಸಂಖ್ಯೆಯಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಆಕಾಂಕ್ಷ ಸಿಂಗ್ ಅವರ ತಾಯಿ ರುಚಿ ಸಿಂಗ್ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಿನ್ಸಿಪಾಲ್ ಆಗಿದ್ದು, ತಂದೆ ರಾಜೇಂದ್ರ ಕುಮಾರ್ ರಾವ್​​​​ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಇದನ್ನೂ ಓದಿ: ಎಡವಟ್ಟು: ನೀಟ್​ ಪರೀಕ್ಷೆಗೆ ಹಾಜರಾಗಿದ್ದವರಿಗಿಂತ ಉತ್ತೀರ್ಣರಾದವರೇ ಹೆಚ್ಚು!

ಕುಟುಂಬಸ್ಥರ ಪ್ರಕಾರ, ಆಕಾಂಕ್ಷ ಸ್ಥಳೀಯ ಸಂಸ್ಥೆಯೊಂದರಲ್ಲಿ ಕೋಚಿಂಗ್​ಗಾಗಿ ಸೇರಿದ್ದರು. ಆದರೆ ಆಕೆಯ ಪ್ರತಿಭೆಯನ್ನು ಕಂಡು ಸಂಸ್ಥೆಯೇ ದೆಹಲಿಯ ಉನ್ನತ ಕೋಚಿಂಗ್ ಸೆಂಟರ್​​​ಗೆ ಕಳುಹಿಸಿಕೊಟ್ಟಿತ್ತು. ಇದು ಆಕೆಯ ದೊಡ್ಡ ಯಶಸ್ಸಿಗೆ ಕಾರಣವಾಯಿತು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.