ಹನುಮಾನ್ಘಡ್(ರಾಜಸ್ಥಾನ): ಸೋಮವಾರ ಸಂಜೆ ಜಂಬಾರ್ ಗ್ರಾಮದ ಜಮೀನೊಂದರಲ್ಲಿ ಯುವಕನೋರ್ವ ಹಲ್ಲೆಯಿಂದ ಸಾವನ್ನಪ್ಪಿದ್ದಾನೆ.
ಜಂಬಾರ್‌ನ ಜಮೀನಿನ ನಿವಾಸಿ ಸಂದೀಪ್ ಅವರ ಪುತ್ರ ಜಗದೀಶ್ ಅಲಿಯಾಸ್ ಜಗ್ಗ ಗೋದಾರ ಗಂಭೀರವಾಗಿ ಗಾಯಗೊಂಡಿದ್ದ. ಆತನ ಮೇಲೆ ಮಾರಕಾಸ್ತ್ರಗಳಿಂದ ಆತನ ಪತ್ನಿ ಸಂಬಂಧಿಕರು ಹಲ್ಲೆ ಮಾಡಿದ್ದರು. ಈ ವೇಳೆ ಗಾಯಗೊಂಡ ಸಂದೀಪ್‌ನನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆಂದು ಪೊಲೀಸ್ ಅಧಿಕಾರಿ ನಂದ್ರಾಮ್ ಭಾದು ತಿಳಿಸಿದ್ದಾರೆ.
ಮೃತ ಸಂದೀಪ್ 4 ತಿಂಗಳ ಹಿಂದೆ ತಮ್ಮ ಗ್ರಾಮದ ಬಳಿಯ ಮತ್ತೊಂದು ಊರಲ್ಲಿ ಅನ್ಯ ಜಾತಿಯ ಯುವತಿಯೊಂದಿಗೆ ಪ್ರೇಮ ವಿವಾಹವಾಗಿದ್ದ. ಆಗ, ಈತ ತನ್ನ ಪತ್ನಿಯನ್ನು ಮನೆಯಿಂದ ಹೊರಗೆ ಓಡಿಸಿದ್ದ. ಇದರಿಂದ ಕೋಪಗೊಂಡ ಮಹಿಳೆಯ ಕುಟುಂಬಸ್ಥರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಸಂದೀಪ್ ಕೂಡಾ ತಲೆಮರೆಸಿಕೊಂಡಿದ್ದ. ಕೆಲ ದಿನಗಳ ಬಳಿಕ ಸಂದೀಪ್ ಮನೆ ಸೇರಿರುವುದನ್ನು ತಿಳಿದ ಮಹಿಳೆಯ ಕುಟುಂಬಸ್ಥರು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಸಂದೀಪ್ ಮೃತದೇಹವನ್ನು ಇಂದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಮೃತನ ತಂದೆಯ ದೂರಿನ ಮೇರೆಗೆ 7 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.