ETV Bharat / bharat

ತಲಾಖ್​ ನಿಷೇಧಕ್ಕೆ ಲೋಕಸಭೆ ಅಸ್ತು ಎಂದ 24 ಗಂಟೆಯೊಳಗೇ 'ತಲಾಖ್' ನೀಡಿದ ಪತಿ -

ಸೂರತ್​ನ 23 ವಯಸ್ಸಿನ ಮಹಿಳೆಯೊಬ್ಬಳು, 'ರಿಕ್ಷಾ ಖರೀದಿಗೆ ನನ್ನ ಪೋಷಕರು 40 ಸಾವಿರ ರೂ. ನೀಡಲಿಲ್ಲ ಎಂಬ ನೆಪವೊಡ್ಡಿ ನನ್ನ ಗಂಡ ತಲಾಖ್​ ನೀಡಿದ್ದಾನೆ. ಅವನಿಗೆ ಶಿಕ್ಷ ಆಗಬೇಕು. ನನಗೆ ನ್ಯಾಯ ದೊರೆಯಬೇಕು' ಎಂದು ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಂತ್ರಸ್ತ ಮಹಿಳೆ
author img

By

Published : Jul 26, 2019, 1:03 PM IST

ಸೂರತ್​: ದೇಶದಲ್ಲಿ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದ ತ್ರಿವಳಿ ತಲಾಖ್ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಗುರುವಾರ ಅಂಗೀಕಾರ ದೊರೆತ 24 ಗಂಟೆಯೊಳಗೆ ಸುರತ್​ನಲ್ಲಿ ಓರ್ವ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ.

ಸೂರತ್​ನ 23 ವಯಸ್ಸಿನ ಮಹಿಳೆಯೊಬ್ಬಳು, 'ರಿಕ್ಷಾ ಖರೀದಿಗೆ ನನ್ನ ಪೋಷಕರು 40 ಸಾವಿರ ರೂ. ನೀಡಲಿಲ್ಲ ಎಂಬ ನೆಪವೊಡ್ಡಿ ನನ್ನ ಗಂಡ ತಲಾಖ್​ ನೀಡಿದ್ದಾನೆ. ಅವನಿಗೆ ಶಿಕ್ಷೆ ಆಗಬೇಕು. ನನಗೆ ನ್ಯಾಯ ದೊರೆಯಬೇಕು' ಎಂದು ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • Gujarat: 23-yr-old woman in Surat alleges that her husband gave her Triple Talaq when her parents didn't give him Rs 40,000 to buy a cycle-rickshaw, says, "He should be punished.I want justice." ACP Special Branch, Surat, says, "Case registered. Further investigation underway." pic.twitter.com/FaSpLpjtqF

    — ANI (@ANI) July 26, 2019 " class="align-text-top noRightClick twitterSection" data=" ">

ಸಂತ್ರಸ್ತೆಯ ದೂರು ದಾಖಲಿಸಿಕೊಂಡು ಮಾತನಾಡಿದ ಎಸಿಪಿ, ಮಹಿಳೆಯ ಆರೋಪದ ಮೇರೆಗೆ ದೂರು ದಾಖಲಿಸಿಕೊಳ್ಳಲಾಗಿದೆ. ಹೆಚ್ಚುವರಿ ವಿಚಾರಣೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಗುರುವಾರ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್‌ ಲೋಕಸಭೆಯಲ್ಲಿ ತ್ರಿವಳಿ ತಲಾಖ್‌ ತಿದ್ದುಪಡಿ ವಿಧೇಯಕ ಮಂಡಿಸಿದರು. ವಿಧೇಯಕಕ್ಕೆ ಪರವಾಗಿ 303 ಮತ್ತು ವಿರುದ್ಧವಾಗಿ 82 ಮತಗಳು ಚಲಾವಣೆ ಆದವು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರಗೊಂಡಂತಾಗಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.