ಹೈದರಾಬಾದ್: ಕಾಲಿಗೆ ಗಂಭೀರವಾದ ಗಾಯವಾಗಿದ್ದ ವ್ಯಕ್ತಿ ಓರ್ವನನ್ನು ರಸ್ತೆಯ ಮೇಲಿನ ಮಳೆ ನೀರು ತಾಗದಂತೆ ಟ್ರಾಫಿಕ್ ಪೊಲೀಸ ತನ್ನ ಬೆನ್ನ ಮೇಲೆ ಹೊತ್ತು ಸಾಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-
#WATCH Hyderabad: A traffic police inspector, A Nagamallu carried a man who had a plastered foot, on his back across a waterlogged road in LB Nagar, yesterday. #Telangana pic.twitter.com/xYDw5sCPi4
— ANI (@ANI) August 31, 2019 " class="align-text-top noRightClick twitterSection" data="
">#WATCH Hyderabad: A traffic police inspector, A Nagamallu carried a man who had a plastered foot, on his back across a waterlogged road in LB Nagar, yesterday. #Telangana pic.twitter.com/xYDw5sCPi4
— ANI (@ANI) August 31, 2019#WATCH Hyderabad: A traffic police inspector, A Nagamallu carried a man who had a plastered foot, on his back across a waterlogged road in LB Nagar, yesterday. #Telangana pic.twitter.com/xYDw5sCPi4
— ANI (@ANI) August 31, 2019
ಹೈದರಾಬಾದಿನ ಹೊರವಲಯದ ಎಲ್ಬಿ ನಗರದಲ್ಲಿ ಈ ಘಟನೆ ನಡೆದಿದ್ದು, ಗಾಯಾಳವನ್ನು ಟ್ರಾಫಿಕ್ ಪೊಲೀಸ್ ಎ. ನಾಗಮಲ್ಲು ಹೊತ್ತು ಸಾಗಿದ್ದಾರೆ. ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ಮೊಳಕಾಲು ವರೆಗು ನೀರು ನಿಂತ್ತಿತ್ತು. ಬಲಗಾಲಿಗೆ ಗಂಭೀರವಾಗಿ ಗಾಯ ಮಾಡಿಕೊಂಡಿದ್ದ ವ್ಯಕ್ತಿ ಓರ್ವ ರಸ್ತೆ ದಾಟಲು ಆಗದೆ ಅಸಾಯಕನಾಗಿ ನಿಂತಿದ್ದ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಎ. ನಾಗಮಲ್ಲು ಗಾಯಾಳವನ್ನು ತನ್ನ ಬೆನ್ನ ಮೇಲೆ ಹೊತ್ತು ಕೊಂಡು ರಸ್ತೆ ದಾಟಿಸಿದ್ದಾನೆ.