ನವದೆಹಲಿ: ಇಂಗ್ಲೆಂಡ್ನಲ್ಲಿ ಪತ್ತೆಯಾದ ಹೊಸ ಪ್ರಭೇದದ ಕೋವಿಡ್ ವೈರಸ್ ಭಾರತಕ್ಕೂ ದಾಪುಗಾಲಿಟ್ಟಾಗಿದೆ. ದೇಶದಲ್ಲಿ ರೂಪಾಂತರಿ ಕೊರೊನಾ ವೈರಸ್ ತಗುಲಿರುವವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
-
A total of 25 cases of mutant United Kingdom virus detected in India after genome sequencing. Four new cases found by NIV, Pune and one new case sequenced in IGIB, Delhi. All 25 persons are in physical isolation at health facilities: Union Ministry of Health#COVID19 pic.twitter.com/HkC2taSkHg
— ANI (@ANI) December 31, 2020 " class="align-text-top noRightClick twitterSection" data="
">A total of 25 cases of mutant United Kingdom virus detected in India after genome sequencing. Four new cases found by NIV, Pune and one new case sequenced in IGIB, Delhi. All 25 persons are in physical isolation at health facilities: Union Ministry of Health#COVID19 pic.twitter.com/HkC2taSkHg
— ANI (@ANI) December 31, 2020A total of 25 cases of mutant United Kingdom virus detected in India after genome sequencing. Four new cases found by NIV, Pune and one new case sequenced in IGIB, Delhi. All 25 persons are in physical isolation at health facilities: Union Ministry of Health#COVID19 pic.twitter.com/HkC2taSkHg
— ANI (@ANI) December 31, 2020
ಕೋವಿಡ್ ಪರೀಕ್ಷೆ ನಡೆಸಲು ದೇಶಾದ್ಯಂತ 10 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ನಾಲ್ವರ ಹಾಗೂ ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (IGIB) ಪ್ರಯೋಗಾಲಯವು ಒಬ್ಬರ ವರದಿ ಪಾಸಿಟಿವ್ ಬಂದಿರುವುದಾಗಿ ದೃಢಪಡಿಸಿವೆ.
ಓದಿ: ದೇಶದಲ್ಲಿ 21 ಸಾವಿರ ಸೋಂಕಿತರು ಪತ್ತೆ; ಹೊಸ ಹರುಷಕೆ ರೂಪಾಂತರಿ ಸೋಂಕು ಅಡ್ಡಿ
ನ. 25ರಿಂದ ಡಿ. 23ರ ನಡುವೆ ಭಾರತಕ್ಕೆ ಸುಮಾರು 33 ಸಾವಿರ ಜನರು ಆಗಮಿಸಿದ್ದರು. ನಿನ್ನೆಯವರೆಗೆ ಬ್ರಿಟನ್ನಿಂದ ಭಾರತಕ್ಕೆ ಬಂದ 20 ಮಂದಿಯಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿತ್ತು. ಮತ್ತೆ ಐವರಿಗೆ ಹೊಸ ಸೋಂಕು ದೃಢಪಟ್ಟಿದ್ದು, ಇದೀಗ ಎಲ್ಲಾ 25 ಸೋಂಕಿತರನ್ನು ಆರೋಗ್ಯ ಕೇಂದ್ರಗಳಲ್ಲಿ ಇರಿಸಿ ಐಸೋಲೇಷನ್ಗೆ ಒಳಪಡಿಸಲಾಗಿದೆ.
ಹಿಂದಿನ ಕೊರೊನಾಗಿಂತಲೂ ಶೇ. 70ರಷ್ಟು ವೇಗವಾಗಿ ಈಗ ರೂಪಾಂತರಗೊಂಡಿರುವ ವೈರಸ್ ಹರಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.