ಹೈದರಾಬಾದ್ (ತೆಲಂಗಾಣ) : ಮೋದಿಯ ವಿರುದ್ಧ ಯಾರಾದರೂ ಮಾತನಾಡಿದರೆ, ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ ಎಂದು ಎಐಎಂಐಎಂ(ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹಾದ್-ಉಲ್-ಮುಸ್ಲೀಮೀನ್) ನಾಯಕ ಅಸದುದ್ದೀನ್ ಓವೈಸಿ ಹೇಳಿದ್ದಾರೆ.
'ಜೈಲ್ ಭರೋ ಆಂದೋಲನ' ಪ್ರಾರಂಭಿಸುವ ಸಮಯ ಬರಲಿದೆ. ದೇಶದ ಎಲ್ಲಾ ಜೈಲುಗಳಲ್ಲಿ ಹಾಕಿದರೂ, ಕೇವಲ 3 ಲಕ್ಷ ಜನರನ್ನು ಮಾತ್ರ ದಾಖಲಿಸಬಹುದು. ಜನರು ರಸ್ತೆಗಿಳಿದರೆ ಜೈಲುಗಳು ಸಾಕಾಗುವುದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.