ETV Bharat / bharat

ವಿಶೇಷ ಅಂಕಣ: ಜನರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿರುವ ನಕಲಿ ಸ್ಯಾನಿಟೈಸರ್ ದಂಧೆ..!

ಕೊರೊನಾ ಪಿಡುಗು ಜನರನ್ನು ಬಾಧಿಸತೊಡಗಿದಂತೆ ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದಕ್ಕೆ ಇನ್ನಿಲ್ಲದ ಮಹತ್ವ ದೊರೆತಿದೆ. ದಂಧೆಕೋರ ಗ್ಯಾಂಗುಗಳು ಈ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದುಕೊಳ್ಳುತ್ತಿದ್ದು ಮಾರುಕಟ್ಟೆಯಲ್ಲಿ ಕಲಬೆರಕೆ ಮತ್ತು ನಕಲಿ ಸ್ಯಾನಿಟೈಜರ್‌ಗಳನ್ನು ತಯಾರಿಸುವ ವಿವಿಧ ಹುನ್ನಾರಗಳಲ್ಲಿ ಮುಳುಗಿವೆ.

author img

By

Published : Aug 17, 2020, 5:20 PM IST

A Thriving Business of Fake Sanitizers
ನಕಲಿ ಸ್ಯಾನಿಟೈಸರ್ ದಂಧೆ

ಹೈದರಾಬಾದ್: ನಕಲಿ ಮತ್ತು ಕಲಬೆರಕೆ ಉತ್ಪನ್ನಗಳನ್ನು ತಯಾರಿಸಿ ಮುಗ್ಧ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಕಾಳದಂಧೆಕೋರರಿಂದಾಗಿ ಕಲಿಯುಗ ಎಂಬುದು ಕಾರ್ಕೋಟಕ ಯುಗವಾಗಿ ಮಾರ್ಪಟ್ಟಿದೆ. ಸಾರ್ವಜನಿಕ ಆರೋಗ್ಯ ನೀತಿಯನ್ನು ಗಾಳಿಗೆ ತೂರಿ ಈ ಗ್ಯಾಂಗ್‌ಗಳು ಹೆಡೆ ಎತ್ತಿವೆ.

ಕೊರೊನಾ ಪಿಡುಗು ಜನರನ್ನು ಬಾಧಿಸತೊಡಗಿದಂತೆ ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದಕ್ಕೆ ಇನ್ನಿಲ್ಲದ ಮಹತ್ವ ದೊರೆತಿದೆ. ದಂಧೆಕೋರ ಗ್ಯಾಂಗುಗಳು ಈ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದುಕೊಳ್ಳುತ್ತಿದ್ದು ಮಾರುಕಟ್ಟೆಯಲ್ಲಿ ಕಲಬೆರಕೆ ಮತ್ತು ನಕಲಿ ಸ್ಯಾನಿಟೈಜರ್‌ಗಳನ್ನು ತಯಾರಿಸುವ ವಿವಿಧ ಹುನ್ನಾರಗಳಲ್ಲಿ ಮುಳುಗಿವೆ.

ಚೀನಾ ಮತ್ತು ಬಾಂಗ್ಲಾದೇಶವು ಇಂತಹ ದುಷ್ಕರ್ಮಿಗಳನ್ನು ಗಲ್ಲಿಗೇರಿಸುತ್ತಿದ್ದರೆ, ಇಂಗ್ಲೆಂಡ್, ಬ್ರೆಜಿಲ್, ಫ್ರಾನ್ಸ್ ಮತ್ತು ಸ್ಪೇನ್ ಆಹಾರ ಸುರಕ್ಷತಾ ಮಾನದಂಡಗಳ ಕಣ್ಗಾವಲು ಮತ್ತು ಮೇಲ್ವಿಚಾರಣೆಯನ್ನು ಹೆಚ್ಚಿಸಿವೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಇವುಗಳಿಗೆ ಪ್ರತಿರೋಧ ಒಡ್ಡುವಂತಹ ಅಂಶಗಳು ಇಲ್ಲದ ನ್ಯೂನತೆ ಬಳಸಿಕೊಂಡು ಅಂತಹ ಗ್ಯಾಂಗ್‌ಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಕಾನೂನು ಮತ್ತು ನಿಬಂಧನೆಗಳನ್ನು ಯಾವುದೇ ಅಡೆತಡೆ ಇಲ್ಲದಂತೆ ಸರಿಯಾಗಿ ಜಾರಿಗೊಳಿಸಿದಾಗ ಮಾತ್ರ ಅವು ಪರಿಣಾಮಕಾರಿಯಾಗಬಲ್ಲವು.

ಪ್ರಸ್ತುತ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮಗ್ನರಾಗಿದ್ದ ಈ ಧನದಾಹಿಗಳು ಈಗ ಕಾನೂನುಬಾಹಿರ ವ್ಯವಹಾರದ ಜೊತೆ ಕೈಜೋಡಿಸಿದ್ದಾರೆ. ಇದರಿಂದಾಗಿ ನಕಲಿ ಗ್ಯಾಂಗುಗಳನ್ನು ಮಟ್ಟಹಾಕಬೇಕಿದ್ದ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಅಗತ್ಯ ಕ್ರಮಕ್ಕೆ ಮುಂದಾಗಬೇಕಿದ್ದ ದೇಶದ ಕಣ್ಗಾವಲು ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ. ಇದೆಲ್ಲದರ ಮಧ್ಯೆ ಹಾಲು, ದ್ವಿದಳ ಧಾನ್ಯಗಳಿಂದ ಹಿಡಿದು ತೈಲ ಹಾಗೂ ಮಸಾಲೆ ಪದಾರ್ಥಗಳವರೆಗೆ ದೇಶದಲ್ಲಿ ಕಲಬೆರಕೆ ತಲೆಎತ್ತಲು ಕಾರಣವಾದ ಹಲವಾರು ಆಡಳಿತಾತ್ಮಕ ಮತ್ತು ವ್ಯವಸ್ಥೆಯ ನ್ಯೂನತೆಗಳ ಬಗ್ಗೆ ಸಿ ಎ ಜಿ ವರದಿ ಗಮನಸೆಳೆದಿದೆ.

ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಕೈಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂಬುದನ್ನೇ ಬಂಡವಾಳ ಮಾಡಿಕೊಂಡು ವಿವಿಧ ಗ್ಯಾಂಗುಗಳು ತಲೆ ಎತ್ತಿವೆ. ಸ್ಯಾನಿಟೈಜರ್‌ಗಳ ಒಟ್ಟಾರೆ ಬೇಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು, 200 ಮಿಲಿ ಗ್ರಾಂನಷ್ಟು ದ್ರಾವಣಕ್ಕೆ 100 ರೂಪಾಯಿ ನಿಗದಿಪಡಿಸಬೇಕು ಎಂದು ಸುಮಾರು 5 ತಿಂಗಳ ಹಿಂದೆ ಖುದ್ದು ಕೇಂದ್ರ ಸರ್ಕಾರವೇ ಸೂಚಿಸಿದೆ.

ಈಥೈಲ್ ಆಲ್ಕೋಹಾಲ್, ಐಸೊಪ್ರೊಪಿಲ್ ಆಲ್ಕೋಹಾಲ್ ಮತ್ತು ಎನ್ ಪ್ರೊಪೈಲ್ ಆಲ್ಕೋಹಾಲ್ ಬಳಸಿ ಗುಣಮಟ್ಟದ ಸ್ಯಾನಿಟೈಜರ್ ತಯಾರಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ, ಕೆಲವೇ ವಾರಗಳಲ್ಲಿ, ನೋಯ್ಡಾ, ಜಮ್ಮು ಮತ್ತು ಕಾಶ್ಮೀರ, ಮುಂಬೈ, ವಡೋದರಾ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಗ್ಯಾಂಗುಗಳು ನಕಲಿ ಸ್ಯಾನಿಟೈಜರ್‌ ಉತ್ಪಾದನೆಯಲ್ಲಿ ಮುಳುಗಿರುವುದು ಬೆಳಕಿಗೆ ಬಂದಿತು. .

ಸಣ್ಣ ತನಿಖೆಯಿಂದ ಪತ್ತೆಯಾದ ದೊಡ್ಡ ಜಾಲ

ಪ್ರಕಾಶಂ, ಕಡಪಾ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ, ಮದ್ಯದ ಚಟಕ್ಕೆ ಒಳಗಾದ ಸುಮಾರು 50 ಜನರು ಮತ್ತಿನಲ್ಲಿ ಸ್ಯಾನಿಟೈಜರ್‌ಗಳನ್ನು ಸೇವಿಸಿ ಮೃತಪಟ್ಟರು. ಈ ಸಾವುಗಳ ಸ್ವರೂಪಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ ತನಿಖೆಯಿಂದಾಗಿ ಸ್ಯಾನಿಟೈಜರ್ ತಯಾರಿಕೆಯಲ್ಲಿ ನಡೆಯುತ್ತಿರುವ ಅಕ್ರಮ ಬಹಹಿರಂಗವಾಯಿತು.

ಮೆಥನಾಲ್ ಎಂಬ ರಾಸಾಯನಿಕ, ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ಗೆ ಸರಾಸರಿ 10ರಿಂದ 15 ರೂಪಾಯಿಗೆ ದೊರೆಯುತ್ತದೆ. ದುಷ್ಕರ್ಮಿ ಗ್ಯಾಂಗ್‌ಗಳು ಇದನ್ನು ಇತರ ರಾಸಾಯನಿಕಗಳೊಂದಿಗೆ ಬೆರೆಸಿ ಕಲಬೆರಕೆ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಿದರು. ಹೈದರಾಬಾದ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ನಕಲಿ ಸರಕು ವ್ಯವಹಾರಗಳು ಈಗ ಗುಡಿಕೈಗಾರಿಕೆ ಮಾದರಿಯಲ್ಲಿ ಬೆಳೆದಿವೆ. ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಬೇಕೆಂಬ ಕಟ್ಟುಪಾಡಿನ ಸೋಗಿನಲ್ಲಿ ಈ ನಕಲಿ ವ್ಯಾಪಾರಿಗಳು ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಲೇ ಲಾಭ ಮಾಡಿಕೊಳ್ಳುತ್ತಿರುವುದು ಅಚ್ಚರಿಯ ವಿಚಾರವಾಗಿದೆ.

ಒಮ್ಮತದ ಕೊರತೆ

ಕೆಲದಿನಗಳ ಹಿಂದೆ ಅವಿಭಜಿತ ಆಂಧ್ರಪ್ರದೇಶದ ಹೈಕೋರ್ಟ್ "ಅಕ್ರಮ ತಡೆಗಟ್ಟಲು ಅಧಿಕಾರಿಗಳಲ್ಲಿ ಒಮ್ಮತದ ಕೊರತೆ ಇದ್ದು ಅವ್ಯವಹಾರದಲ್ಲಿ ತೊಡಗಿರುವ ವ್ಯಾಪಾರಿಗಳು ಸಾರ್ವಜನಿಕ ಆರೋಗ್ಯ ನೀತಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಅಕ್ರಮ ವಹಿವಾಟಿನ ಒಟ್ಟು ಪ್ರಕ್ರಿಯೆಯಲ್ಲಿ ನಿಜವಾದ ಅಪರಾಧಿಗಳು ಯಾರು ಎಂಬುದನ್ನು ಸೂಚಿಸುವ ಅಸಲಿ ಪುರಾವೆಯಂತಿತ್ತು ಈ ಹೇಳಿಕೆ.

ಕೋವಿಡ್ ಸೋಂಕಿನ ಸಂದರ್ಭದಲ್ಲಿ ಇದು ಮತ್ತಷ್ಟು ನಿಜವಾಗಿದೆ. ಮೆಥನಾಲ್ ಅನ್ನು ಬಳಸಬಾರದೆಂಬ ಎಚ್ಚರಿಕೆಗಳನ್ನು ರಕ್ತಪಿಪಾಸುಗಳು ನಿರ್ಲಕ್ಷಿಸುತ್ತಿದ್ದಾರೆ. ಸಮಾಜ ದ್ರೋಹಿಗಳ ಇಂತಹ ಕೃತ್ಯದಿಂದಾಗಿ ಸುರಕ್ಷತೆ ಇಲ್ಲದ ಸ್ಯಾನಿಟೈಜರ್ ಗಳು ಕಣ್ಣುಗಳನ್ನು ಹಾನಿಗೊಳಿಸುವ, ನರಮಂಡಲವನ್ನು ಕುಗ್ಗಿಸುವ, ಕಡೆಗೆ ಸಾವಿನ ದವಡೆಗೂ ದೂಡುವ ದೀರ್ಘಾವಧಿಯ ಕಾಯಿಲೆಗಳಿಗೆ ಕಾರಣವಾಗುತ್ತಿವೆ.

ಅಂತ್ಯವಿಲ್ಲದ ತ್ಯಾಗ

ಚೀನಾ ಮತ್ತು ಬಾಂಗ್ಲಾದೇಶವು ದುಷ್ಕರ್ಮಿಗಳನ್ನು ಮರಣದಂಡನೆಗೆ ಗುರಿಪಡಿಸುತ್ತಿದ್ದರೆ, ಇಂಗ್ಲೆಂಡ್, ಬ್ರೆಜಿಲ್, ಫ್ರಾನ್ಸ್ ಹಾಗೂ ಸ್ಪೇನ್ ದೇಶಗಳು ಆಹಾರ ಸುರಕ್ಷತಾ ಮಾನದಂಡಗಳನ್ನು ಅನುಷ್ಠಾನಗೊಳಿಸುವಲ್ಲಿ ಮತ್ತು ಮೇಲ್ವಿಚಾರಣೆ ಮಾಡುವಲ್ಲಿ ನಿರತವಾಗಿವೆ. ದೇಶದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗದೇ ಇರುವುದರಿಂದ ಅಪರಾಧಿ ಕೃತ್ಯ ಎಸಗುವ ಗ್ಯಾಂಗ್‌ಗಳಿಗೆ ಯಾವುದೇ ಅಡೆತಡೆ ಇಲ್ಲದೆ ತಮ್ಮ ಅಕ್ರಮ ವಹಿವಾಟುಗಳನ್ನು ವಿಸ್ತರಿಸಲು ವರದಾನವಾಗಿದೆ.

ಹಾಲಿನಲ್ಲಿ ಕಲಬೆರಕೆ ಮಾಡುವುದು ಶಿಶುಗಳ ಬೆಳವಣಿಗೆ ಮೇಲೆ ಮಾರಕ ಪರಿಣಾಮ ಬೀರುತ್ತದೆ. ತೈಲಗಳು ಮತ್ತಿತರ ವಸ್ತುಗಳಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಬೆರೆಸುವುದು ಕರುಳಿನಲ್ಲಿ ಕ್ಯಾನ್ಸರ್ ಮತ್ತು ಹುಣ್ಣುಗಳಿಗೆ ಕಾರಣವಾಗಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ನಿಧಾನವಾಗಿ, ಅಂತಹ ಕಲಬೆರಕೆ ಉತ್ಪನ್ನಗಳ ಸಾಲಿನಲ್ಲಿ ನಕಲಿ ಸ್ಯಾನಿಟೈಜರ್‌ಗಳು ಸ್ಥಾನ ಪಡೆಯುತ್ತಿವೆ. ಅದು ಅನೇಕ ಮುಗ್ಧ ಮಂದಿಯ ಪ್ರಾಣವನ್ನು ಆಪೋಶನ್ ತೆಗೆದುಕೊಳ್ಳಲು ಸಜ್ಜಾಗಿದೆ.

ಫಿಲ್ಟರ್ ಮಾಡಲು ಹೆಚ್ಚಿನ ದರ

ಅಖಿಲ ಭಾರತ ಮಟ್ಟದ ಪ್ರಾಧಿಕಾರವೊಂದನ್ನು ಸ್ಥಾಪಿಸಿ ಕೇಂದ್ರ ಸರ್ಕಾರ ಕೈತೊಳೆದುಕೊಂಡಂತೆ ಕಾಣುತ್ತಿದೆ. ರಾಜ್ಯಗಳ ಮಟ್ಟದಲ್ಲಿ, ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿರ್ದಿಷ್ಟ ಕಾರ್ಯತಂತ್ರ ಇಲ್ಲ.. ಕಣ್ಗಾವಲು ವ್ಯವಸ್ಥೆಯನ್ನೇ ಇಡಿಯಾಗಿ ಶುಚಿಗೊಳಿಸುವ ಅಗತ್ಯ ಇದೆ. ಇದರಿಂದ ನಕಲಿ ಮಾಫಿಯಾದ ಬುನಾದಿ ಪೂರ್ಣಪ್ರಮಾಣದಲ್ಲಿ ನಾಶವಾಗುತ್ತದೆ.

ಇದು ಕಾನೂನು ಮತ್ತು ನಿಬಂಧನೆಗಳನ್ನು ರೂಪಿಸುವ ಮತ್ತು ಅಷ್ಟಕ್ಕೆ ಸುಮ್ಮನಾಗುವ ಸಂಗತಿ ಆಗಬಾರದು. ಕ್ಷೇತ್ರ ಮಟ್ಟದಲ್ಲಿ ಸರಿಯಾಗಿ ನಿಯಮಗಳು ಜಾರಿಗೆ ಬಂದರೆ ಮಾತ್ರ ಅವು ಪರಿಣಾಮಕಾರಿಯಾಗಿರುತ್ತವೆ. ದೌರ್ಜನ್ಯವನ್ನು ನಿರ್ದಯವಾಗಿ ಕೊನೆಗೊಳಿಸಲು ಸಮರ್ಥ ತಂತ್ರಕ್ಕೆ ಮುಂದಾದಾಗ ಕ್ಷುದ್ರ ಪಡೆಗಳ ಎಲ್ಲಾ ಹಾದಿಗಳು ಬಹುಬೇಗ ಮುಚ್ಚುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.