ಕಾರೈಕುಡಿ(ತಮಿಳುನಾಡು): ಮಾರಕ ಕೊರೋನಾ ವೈರಸ್ ಸೋಂಕನ್ನು ತಡೆಯಲು ತಮಿಳುನಾಡಿನ ಹೋಟೆಲೊಂದರಲ್ಲಿ ಔಷಧಿ ಇದೆಯಂತೆ.
‘ಕೊರೋನಾ ವೈರಸ್ ತಡೆಗಟ್ಟಲು, ಸಣ್ಣ ಈರುಳ್ಳಿಯ ಉತ್ತಪ್ಪಮ್ ತಿನ್ನಿರಿ’ ಎಂದು ಬರೆದು ಬೋರ್ಡ್ ಅನ್ನು ರೆಸ್ಟೋರೆಂಟ್ ಹಾಕಿಕೊಂಡಿದೆ. ಈರುಳ್ಳಿ ಉತ್ತಪ್ಪ ತಿನ್ನುವುದರಿಂದ ಮಾರಕ ಕೊರೋನಾ ವೈರಸ್ ಸೋಂಕನ್ನು ತಡೆಯಬಹುದು ಎಂದು ತಮಿಳುನಾಡಿನ ಹೋಟೆಲ್ ಒಂದು ಹೇಳಿದೆ.
ಭಾರತದಲ್ಲಿ ಈವರೆಗೆ ಕೇರಳದ ಇಬ್ಬರಲ್ಲಿ ಕೊರೋನಾ ವೈರಸ್ ಕಂಡು ಬಂದಿವೆ. ಅವರಲ್ಲಿ ಒಬ್ಬರು ಚೀನಾದ ವುಹಾನ್‌ನಲ್ಲಿ ಓದುತ್ತಿದ್ದರು ಮತ್ತು ಇನ್ನೊಬ್ಬರು ಕೆಲವು ಕಾರಣಗಳಿಗಾಗಿ ಚೀನಾಕ್ಕೆ ಹೋಗುತ್ತಿದ್ದರು. ಈ ರೋಗವು ಚೀನಾದಲ್ಲಿ ಸಾಂಕ್ರಾಮಿಕ ರೂಪವನ್ನು ಪಡೆದುಕೊಂಡಿದೆ. ಕೊರೋನಾದಿಂದಾಗಿ ಇದುವರೆಗೆ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕೊರೋನಾ ವೈರಸ್ ಹರಡುವ ಅಪಾಯದಿಂದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಿಶ್ವಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಇದೇ ವಿಚಾರವಾಗಿ ತಮಿಳುನಾಡಿನ ಕಾರೈಕುಡಿಯಲ್ಲಿ ಹೋಟೆಲ್ ನಡೆಸುತ್ತಿರುವ ವ್ಯಕ್ತಿಯೊಬ್ಬರು ನಮ್ಮ ಆಹಾರದಲ್ಲಿ ಸಣ್ಣ ಈರುಳ್ಳಿ ಬಳಸಿದರೆ ಈ ಅಪಾಯಕಾರಿ ವೈರಸ್ ಅನ್ನು ತಡೆಗಟ್ಟಬಹುದು ಎಂದು ಹೇಳಿದ್ದಾರೆ.