ETV Bharat / bharat

ರಾಸಾಯನಿಕ ಬಳಕೆಗೆ ಗುಡ್​ ಬೈ: ರಾಜಸ್ಥಾನದಲ್ಲಿದೆ ಅಪರೂಪದ ಸಿಂಧೂರ ಗಿಡ..!

ರಾಜಸ್ಥಾನದಲ್ಲಿ ಬಲು ಅಪರೂಪದ ಸಿಂಧೂರ ಗಿಡವಿದ್ದು, ಅದು ಜನರ ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದ್ದು ಧಾರ್ಮಿಕ ನಂಬಿಕೆಯನ್ನು ಹೆಚ್ಚಿಸಿದೆ.

A rare  vermillion tree in Rajasthan
ರಾಜಸ್ಥಾನದಲ್ಲಿದೆ ಅಪರೂಪದ ಸಿಂಧೂರ ಗಿಡ
author img

By

Published : Oct 1, 2020, 6:04 AM IST

ರಾಜಸ್ಥಾನ: ಹಿಮಾಲಯದಲ್ಲಿ ಬೆಳೆಯುವ ವರ್ಮಿಲಿಯನ್ ಅಥವಾ ಸಿಂಧೂರ ಗಿಡವು ರಾಜಸ್ಥಾನದಲ್ಲಿ ಕಂಡು ಬರುವುದು ಬಲು ಅಪರೂಪ. ಆದರೆ ಅಜ್ಮೀರ್ ನಗರದ ಅಶೋಕ್ ಜಟೋಲಿಯಾ ಎಂಬುವವರು ಸಿಂಧೂರದ ಗಿಡವನ್ನು ನೆಟ್ಟಿದ್ದಾರೆ. ಈ ಗಿಡವು ಜನರ ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದ್ದು, ಅವರ ಧಾರ್ಮಿಕ ನಂಬಿಕೆಯನ್ನು ಹೆಚ್ಚಿಸಿದೆ. ನೈಸರ್ಗಿಕ ಸಿಂಧೂರವನ್ನು ತೆಗೆದುಕೊಂಡು ಹೋಗಲು ಅಲ್ಲಿ ಜನರು ಸೇರುತ್ತಾರೆ. ಹಾಗೂ ದೀಪಾವಳಿಯಂದು ಈ ಪವಿತ್ರ ಗಿಡಕ್ಕೆ ಪೂಜೆ ಮಾಡಲಾಗುತ್ತದೆ.

ಸಿಂಧೂರವನ್ನು ತಯಾರಿಸಲಾಗಿಲ್ಲ. ಅದು ಪ್ರಕೃತಿಯ ಉತ್ಪನ್ನ ಎಂದು ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಸಿಂಧೂರ ಗಿಡವನ್ನುಇಂಗ್ಲಿಷ್​​​​ನಲ್ಲಿ ಕಲಿಮಾ ಎಂದು ಕರೆಯುತ್ತಾರೆ. ಈ ಗಿಡ ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಕಂಡು ಬರುತ್ತದೆ. ಅಶೋಕ್ ಅವರ ಮನೆಯಲ್ಲಿರುವ ಏಕೈಕ ಸಿಂಧೂರ ಗಿಡವು, ಜನರಿಗೆ ನಂಬಿಕೆಯ ಕೇಂದ್ರವಾಗಿದೆ. ಜನರು ಮರವನ್ನು ಪವಿತ್ರವೆಂದು ನೋಡುತ್ತಾರೆ ಮತ್ತು ಅದರಿಂದ ಬರುವ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಾರೆ.

ರಾಜಸ್ಥಾನದಲ್ಲಿದೆ ಅಪರೂಪದ ಸಿಂಧೂರ ಗಿಡ

ಮೊದಲು ಅದು ಸಿಂಧೂರದ ಗಿಡವೆಂದು ಅಶೋಕ್​ ಅವರಿಗೆ ತಿಳಿದಿರಲಿಲ್ಲ. ಅವರು ಏಳು ವರ್ಷಗಳ ಹಿಂದೆ ಭೋಪಾಲ್‌ನಿಂದ ಸಸಿ ತಂದು ತಮ್ಮ ತೋಟದಲ್ಲಿ ನೆಟ್ಟಿದ್ದಾರೆ. ಆ ಸಸಿ ಬೆಳೆದು ಫಲವನ್ನು ನೀಡಲು ಪ್ರಾರಂಭಿಸಿದಾಗ, ಅದು ಸಿಂಧೂರ ಗಿಡ ಎಂದು ಗೊತ್ತಾಗಿದೆ. ಈ ಗಿಡದ ಬಗ್ಗೆ ತಿಳಿದ ನಂತರ ಬಾಲಾಜಿ ಮತ್ತು ಗಣೇಶನ ಭಕ್ತರು ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಸಿಗುವ ಸಿಂಧೂರ ಕೆಂಪು ಬಣ್ಣದ್ದಾಗಿದ್ದು, ಅದರಲ್ಲಿ ರಾಸಾಯನಿಕಗಳಿವೆ. ಆದರೆ ಮರದಿಂದ ಪಡೆದ ಕುಂಕುಮವು ಚಿನ್ನದ ಹೊಳಪನ್ನು ಹೊಂದಿದೆ. ಇದು ನೈಸರ್ಗಿಕವಾಗಿದೆ. ಬೀಜಗಳನ್ನು ಒಣಗಿಸಿ ರುಬ್ಬಿದ ನಂತರ ಬಣ್ಣವು ತೇಜಸ್ಸು ಹೊಂದುತ್ತದೆ ಎಂದು ಅಶೋಕ್​​ ಅವರ ಪತ್ನಿ ಸುನೀತಾ ಹೇಳುತ್ತಾರೆ.

ಜಟೋಲಿಯಾ ಕುಟುಂಬದವರಿಗೆ ಗಿಡದ ಬಗ್ಗೆ ತಿಳಿದ ನಂತರ, ಅದನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಗಿಡದ ಸಿಂಧೂರವನ್ನು ಹನುಮಾನ್ ವಿಗ್ರಹದ ಹಚ್ಚಿದಾಗ ದೇವರ ಮೂರ್ತಿಯು ಚಿನ್ನದಂತೆ ಹೊಳೆದಿದೆ. ಧಾರ್ಮಿಕ ಕೆಲಸಗಳಿಗೆ ಮತ್ತು ಮಹಿಳೆಯರಿಗೆ ಸಿಂಧೂರವನ್ನು ಉಚಿತವಾಗಿ ನೀಡುತ್ತಾರೆ.

ಈ ಸಿಂಧೂರ ಗಿಡವನ್ನು ಪವಿತ್ರವೆಂದು ಪರಿಗಣಿಸಲಾಗಿದ್ದು, ಈ ಗಿಡದಿಂದ ಅಶೋಕ್ ಅವರ ಕುಟುಂಬ ಪ್ರಸಿದ್ಧಿ ಪಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.