ಮುಂಬೈ: ಇತ್ತೀಚೆಗೆ ಭಾರತ ಪ್ರವಾಸ ಕೈಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗಾಗಿ ಏರ್ಪಡಿಸಿದ್ದ ವಿಶೇಷ ಭೋಜನಕೂಟದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಎ. ಆರ್. ರಹಮಾನ್ ಕೂಡ ಅತಿಥಿಯಾಗಿದ್ದರು.
- " class="align-text-top noRightClick twitterSection" data="
">
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಭೋಜನಕೂಟದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಗಣ್ಯರೊಂದಿಗೆ 'ಜೈ ಹೋ' ಹಾಡಿನ ಸಂಯೋಜಕ ರಹಮಾನ್ ಭಾಗವಹಿಸಿದ್ದು, ಇದೇ ವೇಳೆ, ಕೆಲಕಾಲ ಕೋತಿಯೊಂದಿಗೆ ಕಾಲ ಕಳೆದು ಎಂಜಾಯ್ ಮಾಡಿದ್ದಾರೆ.
ಭೋಜನಕೂಟ ಏರ್ಪಡಿಸಿದ್ದ ಸ್ಥಳದ ಸಮೀಪದಲ್ಲೇ ಕೋತಿಯೊಂದು ಹೂವಿನ ಕುಂಡದಿಂದ ಎಲೆಗಳನ್ನು ಕಿತ್ತು ತಿನ್ನುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿರುವ ರಹಮಾನ್, ಅದನ್ನು ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, "ನಮ್ಮ ಪುಟ್ಟ ಸ್ನೇಹಿತ ಕೂಡ ಭೋಜನ ಸವಿಯುತ್ತಿದ್ದಾನೆ" ಎಂದು ಅಡಿಬರಹ ನೀಡಿದ್ದಾರೆ.
ಇನ್ನು ತಾವು ಸೇನಾ ಅಧಿಕಾರಿಗಳೊಂದಿಗಿರುವ, ಡಿನ್ನರ್ ಹಾಲ್ನಲ್ಲಿ ತೆಗೆದಿರುವ ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ.