ETV Bharat / bharat

ವಿಶೇಷ ಚೇತನರ ಸೌಲಭ್ಯಕ್ಕಾಗಿ ಹೋರಾಟ: 'ವಿವೇಕ', ಅಚಲ ಆತ್ಮವಿಶ್ವಾಸ ಇದ್ದರೆ ಜಯ ನಿಶ್ಚಿತ..!

ವಿಮಾನ ನಿಲ್ದಾಣಗಳಲ್ಲಿ ವಿಶೇಷ ಚೇತನರಿಗೆ ಸೌಲಭ್ಯ ಒದಗಿಸಲು ಹೋರಾಡಿದ ವಿವೇಕ್ ಜೋಶಿ ಅವರನ್ನು ವಿಶೇಷ ಚೇತನರ ಸಬಲೀಕರಣಕ್ಕಾಗಿ ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಹಾಗೂ ಡಾ.ಪ್ರಣಬ್ ಮುಖರ್ಜಿ ಅವರು ಗೌರವಿಸಿದ್ದರು.

A fight for the rights of specially abled air passengers
ವಿಶೇಷ ಚೇತನರ ಸೌಲಭ್ಯಕ್ಕಾಗಿ ಹೋರಾಡಿದ ವಿವೇಕ್ ಜೋಶಿ
author img

By

Published : Sep 25, 2020, 6:04 AM IST

ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ವಿವೇಕ್ ಜೋಶಿ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದವರು. ಹಾಗೂ ವಿಮಾನ ನಿಲ್ದಾಣಗಳಲ್ಲಿ ವಿಶೇಷ ಚೇತನರಿಗೆ ಸೌಲಭ್ಯ ಒದಗಿಸಲು ಹೋರಾಡಿದವರರು. ಸರಿಯಾಗಿ ಮಾತನಾಡಲು ಹಾಗೂ ನಡೆಯಲು ಸಾಧ್ಯವಾಗದಿದ್ದರೂ ವಿವೇಕ್ ಜೋಶಿ, ಎಲ್​​ಎಲ್​​​​ಬಿ, ಎಲ್​​​​ಎಲ್​​​​ಎಂ ಹಾಗೂ ಎಂಬಿಎ ಪದವಿ ಪಡೆದಿದ್ದು, ಇದೀಗ ಪಿಹೆಚ್‌ಡಿ ಮಾಡುತ್ತಿದ್ದಾರೆ.

ಅಂಗವಿಕಲರ ಸಬಲೀಕರಣಕ್ಕಾಗಿ ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಹಾಗೂ ಡಾ.ಪ್ರಣಬ್ ಮುಖರ್ಜಿಯವರು ವಿವೇಕ್ ಜೋಶಿಯವರನ್ನು ಗೌರವಿಸಿದ್ದರು. ಅವರನ್ನು ಬೆಳೆಸಿದ ಕಾರಣಕ್ಕಾಗಿ ವಿವೇಕ್ ಜೋಶಿಯ ತಾಯಿ ಕೋಶಲಿಯಾ ದೇವಿ ಅವರನ್ನು, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅಭಿನಂದಿಸಿದ್ದಾರೆ.

ವಿಶೇಷ ಚೇತನರ ಸೌಲಭ್ಯಕ್ಕಾಗಿ ಹೋರಾಡಿದ ವಿವೇಕ್ ಜೋಶಿ

ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದ ಒಂದು ಘಟನೆಯು, ವಿವೇಕ್ ಅವರ ಜೀವನ ಬದಲಿಸಿತು. ಅವರಂತಹ ಅನೇಕ ವಿಶೇಷ ಚೇತನರ ಹಕ್ಕುಗಳಿಗಾಗಿ ಹೋರಾಡಲು ಶಕ್ತಿ ನೀಡಿತು.

ವಿವೇಕ್ ವಿಮಾನ ನಿಲ್ದಾಣದಲ್ಲಿ ತಮ್ಮ ಹಕ್ಕುಗಳಿಗಾಗಿ ಪಟ್ಟು ಬಿಡದೇ ಮಾತನಾಡಿದಾಗ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೆ, ಇಂದು ಜೋಶಿಯವರ ಶ್ರಮಕ್ಕೆ ಫಲ ಸಿಕ್ಕಂತಾಗಿದೆ. ಏರ್ ಇಂಡಿಯಾ ಇವರ ಮಾತನ್ನು ಗಣನೆಗೆ ತೆಗೆದುಕೊಂಡಿದ್ದು, ವಿಶೇಷ ಚೇತನ ವ್ಯಕ್ತಿಗಳು ಮತ್ತು ಹಿರಿಯ ನಾಗರಿಕರೊಂದಿಗೆ ವ್ಯವಹರಿಸುವಾಗ ಅನುಸರಿಸಬೇಕಾದ ಸೂಚನೆಗಳನ್ನು ನೀಡಿದೆ.

ಈ ಹೋರಾಟದಲ್ಲಿ ಇವರ ತಂದೆ ಕೂಡ ಕೈ ಜೋಡಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದ ವಾದದಲ್ಲಿನ ಗೆಲುವು, ಇಡೀ ವಿಶೇಷ ಚೇತನ ಸಮುದಾಯ ಮತ್ತು ಹಿರಿಯ ನಾಗರಿಕರ ಗೆಲುವು ಎಂದು ಅವರು ಹೇಳುತ್ತಾರೆ.

ವಿವೇಕ್ ಮತ್ತು ಅವರ ತಂದೆಯ ಈ ಕಾರ್ಯ ಅದೆಷ್ಟೋ ವಿಶೇಷ ಚೇತನರಿಗೆ ತುಂಬಾ ಸಹಾಯಕವಾಗಿದೆ. ತಮ್ಮ ಹಕ್ಕುಗಳಿಗಾಗಿ ಮಾತನಾಡಲು ವಿವೇಕ್‌ ಪ್ರೇರೇಪಿಸಿದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.