ETV Bharat / bharat

ಕಂಗನಾ ರಣಾವತ್​​ ವಿರುದ್ಧ ಮಾನಹಾನಿ ಪ್ರಕರಣ: ನಟಿಗೆ ಸಮನ್ಸ್​ ಜಾರಿ - actor Kangana Ranaut lastest news

ಗೀತ ರಚನೆಕಾರ ಜಾವೇದ್ ಅಖ್ತರ್ ಅವರು ಕಂಗನಾ ರಣಾವತ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಸಂಬಂಧ ಹೆಚ್ಚಿನ ತನಿಖೆ ಅಗತ್ಯ ಎಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ ನಂತರ ಕಂಗನಾಗೆ ನ್ಯಾಯಾಲಯ ಸಮನ್ಸ್​ ಜಾರಿ ಮಾಡಿದೆ.

ಕಂಗನಾ ರನೌತ್
ಕಂಗನಾ ರನೌತ್
author img

By

Published : Feb 1, 2021, 4:17 PM IST

ಮುಂಬೈ: ಖ್ಯಾತ ಗೀತ ರಚನೆಕಾರ ಜಾವೇದ್​ ಅಖ್ತರ್​ ಅವರು ನಟಿ ಕಂಗನಾ ರನೌತ್​ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಇಂದು ಮುಂಬೈ ಕೋರ್ಟ್​ ಅವರಿಗೆ ಸಮನ್ಸ್​​ ನೀಡಿದೆ.

ಜಾವೇದ್​ ಅಖ್ತರ್​ ಅವರು ಈ ಹಿಂದೆ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಬಗ್ಗೆ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಹೇಳಿದ ಹಿನ್ನೆಲೆ ಕೋರ್ಟ್​ ಸಮನ್ಸ್​ ಜಾರಿ ಮಾಡಿದೆ.

ಈ ಪ್ರಕರಣದ ತನಿಖೆ ನಡೆಸುವಂತೆ ಡಿಸೆಂಬರ್‌ನಲ್ಲಿ ಅಂಧೇರಿ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ರವರು ಜುಹೂ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿದ್ದರು.

ಓದಿ: ಶೂಟಿಂಗ್​​​​​​ನಿಂದ​​​​​​​​​​​​ ಬ್ರೇಕ್ ಪಡೆದು ಗೆಳತಿಯರೊಂದಿಗೆ ಟ್ರಿಪ್ ಹೊರಟ ಮೋಕ್ಷಿತಾ

ಈ ವರದಿಯನ್ನು ಪರಿಶೀಲಿಸಿದ ಮ್ಯಾಜಿಸ್ಟ್ರೇಟ್‌ ಆರ್‌.ಆರ್‌ ಖಾನ್‌ ಅವರು, ಕಂಗನಾ ರಣಾವತ್‌ಗೆ ಸಮನ್ಸ್‌ ಜಾರಿ ಮಾಡಿದ್ದಾರೆ. ಮುಂದಿನ ವಿಚಾರಣೆಯ ದಿನಾಂಕವನ್ನು ಮಾರ್ಚ್‌ 1 ಕ್ಕೆ ನಿಗದಿ ಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.