ನವದೆಹಲಿ: ನಾಳೆ ಸಂಜೆ ವೇಳೆಗೆ ಅಂಫಾನ್ ಎಂಬ ಭೀಕರ ಚಂಡಮಾರುತ ಭಾರತವನ್ನು ಅಪ್ಪಳಿಸಲಿದ್ದು, ಇದಕ್ಕಾಗಿ ಸಾಕಷ್ಟು ಮುಂಜಾಗ್ರತೆ ಕ್ರಮ ವಹಿಸಲಾಗಿದೆ. ಭಾರತವನ್ನು ಅಪ್ಪಳಿಸಲಿರುವ ಈ ಅಂಫಾನ್ ಚಂಡಮಾರುತದ ಬಗ್ಗೆ ನಿಮಗೆ ತಿಳಿಯದ ಕೆಲವು ವಿಷಯಗಳಿವೆ.
![A brief description of Amphan](https://etvbharatimages.akamaized.net/etvbharat/prod-images/7267038_thu.jpg)
ಸೈಕ್ಲೋನ್‌ಗಳಿಗೆ ಹೆಸರಿಡಲು ಕಾರಣವೇನು ಗೊತ್ತಾ?
2000 ರಲ್ಲಿ, ವಿಶ್ವ ಹವಾಮಾನ ಸಂಸ್ಥೆ , ಯುನೈಟೆಡ್ ನೇಷನ್ಸ್ ಎಕಾನಾಮಿಕ್ಸ್ ಅಂಡ್ ಸೋಷಿಯಲ್ ಕಮಿಷನ್ ಫಾರ್ ಏಷ್ಯಾ ಸಭೆ ಸೇರಿ ಸೈಕ್ಲೋನ್‌ಗಳಿಗೆ ಹೆಸರಿಡುವ ಪದ್ಧತಿ ಪ್ರಾರಂಭಿಸಲು ನಿರ್ಧರಿಸಲಾಯಿತು. ಪ್ರತೀ ದೇಶದಿಂದ ಬಂದ ಸೂಚನೆ ಮತ್ತು ಹೆಸರುಗಳನ್ನು ಪಟ್ಟಿಮಾಡಿ WMO ಮತ್ತು ESCAP ಪ್ಯಾನಲ್ ಯಾವುದಾದರೂ ಒಂದು ಹೆಸರನ್ನು ಅಂತಿಮಗೊಳಿಸುತ್ತದೆ.
ಅಂಫಾನ್ ಹೆಸರು ಬಂದಿದ್ದು ಹೀಗೆ!
2004ರಲ್ಲಿ ಚಂಡಮಾರುತ ಕಾಣಿಸಿಕೊಂಡಿತು. ಈ ವೇಳೆ, ಎಂಟು ದೇಶಗಳು ಸುಮಾರು 64 ಹೆಸರುಗಳನ್ನು ನೀಡಿದವು ಆ ಪೈಕಿ ತೈವಾನ್ ನೀಡಿದ್ದ ಅಂಫಾನ್ ಎಂಬ ಹೆಸರನ್ನು ಅಂತಿಮಗೊಳಿಸಲಾಗಿದೆ.
ಹೆಸರಿಸುವಾಗ ಪಾಲಿಸಬೇಕಾದ ಸೂಚನೆಗಳು:
ಯಾವುದೇ ಹೆಸರಾದರೂ ತಟಸ್ಥವಾಗಿರಬೇಕು, ರಾಜಕೀಯ ಉದ್ದೇಶಗಳಿರಬಾರದು, ಯಾವುದೇ ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಭಿಕೆಗೆ ಧಕ್ಕೆ ಉಂಟುಮಾಡುವಂತಿಲ್ಲ. ಯಾವುದೇ ಗುಂಪಿನ ಭಾವನೆಗೆ ಧಕ್ಕೆ ಉಂಟುಮಾಡುವಂತಿರಬಾರದು. ಅಸಭ್ಯ ಮತ್ತು ಕಠಿಣವಾಗಿರುವಂತಿಲ್ಲ ಎಂಬ ನಿಯಮವಿದೆ.