ನಗೌರ್: ರಾಜಸ್ಥಾನದ ನಗೌರ್ನಲ್ಲಿ ಜನಿಸಿದ ಗಂಡು ಮಗುವೊಂದು ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ. ಮಗುವಿನ ಬೆರಳುಗಳು ಒಂದಕ್ಕೊಂದು ಅಂಟಿಕೊಂಡಿದ್ದು,ದೇಹದ ಚರ್ಮ ವಿಚಿತ್ರ ಹಾಗೂ ಗಡುಸಾಗಿದೆ. ಈ ಖಾಯಿಲೆ ಹೇಗಿದೆ ಅಂದ್ರೆ, ಮಗುವಿನ ದೇಹ ಪೂರ್ತಿ ಪ್ಲಾಸ್ಟಿಕ್ ಶೀಟ್ನಿಂದ ಸುತ್ತಿದಂತೆ ಕಾಣುತ್ತಿದೆ.
ಈ ಅಪರೂಪದ ಕಾಯಿಲೆಯ ಲಕ್ಷಣವನ್ನು ತಿಳಿಸಿದ ಆಸ್ಪತ್ರೆಯ ಶಿಶುವೈದ್ಯ ಡಾ. ಮುಲಾರಮ್ ಕಡೇಲಾ, 6 ಲಕ್ಷದಲ್ಲಿ ಒಂದು ಮಗುವಿಗೆ ಈ ಖಾಯಿಲೆ ಇರುತ್ತದೆ. ಈ ಲಕ್ಷಣಗಳಿರುವ ಮಗುವನ್ನು 'ಕಲೋಡಿಯನ್ ಬೇಬಿ' ಕನ್ನಡದಲ್ಲಿ ಇದನ್ನು ಮತ್ಸ್ಯವಾದಿ ಎಂದು ಕರೆಯಲಾಗುತ್ತದೆ. ಮಗುವಿನ ಚರ್ಮವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿದಂತೆ ಭಾಸವಾಗುತ್ತಿದೆ.
ಮಗುವಿನ ಪೋಷಕರಾದ ಸಹದೇವ್ ಹಾಗೂ ದುರ್ಗಾ, ಗುದಾ ಭಗ್ವಾಂಡಾಸ್ನ ನಿವಾಸಿಗಳಾಗಿದ್ದು, ಇದು ಅವರಿಗೆ ಜನಿಸಿದ ಮಕ್ಕಳಲ್ಲಿ ಬದುಕುಳಿದ ಎರಡನೇ ಮಗುವಾಗಿದೆ. ಈ ಹಿಂದೆ ಜನಿಸಿದ ಮೂರೂ ಮಕ್ಕಳು ಮೃತಪಟ್ಟಿದ್ದು, ನಾಲ್ಕನೇ ಮಗು ಬದುಕುಳಿದಿತ್ತು. ಈಗ ಈ ಮಗುವಿನ ಸ್ಥಿತಿ ನೋಡಿ ಮತ್ತೆ ಪೋಷಕರು ಆಘಾತಗೊಂಡಿದ್ದಾರೆ.
ಸದ್ಯ ಮಗು ಉಸಿರಾಟದ ತೊಂದರೆಯಯಿಂದ ಬಳಲುತ್ತಿದ್ದು,ವಿಶೇಷ ನಿಗಾ ವ್ಯವಸ್ಥೆಯಲ್ಲಿಡಲಾಗಿದೆ.