ಲಕ್ನೋ (ಉತ್ತರ ಪ್ರದೇಶ) : ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಯುವಕರು ಮತ್ತು ಅವರ ಕುಟುಂಬಗಳಿಗೆ ಒಗ್ಗಟ್ಟನ್ನು ಬಿಂಬಿಸಲು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ವಿದ್ಯುತ್ ದೀಪಗಳನ್ನು ಸ್ವಿಚ್ ಆಫ್ ಮಾಡುವಂತೆ ಮನವಿ ಮಾಡಿದ್ದಾರೆ.
ಬನ್ನಿ, ನಿರುದ್ಯೋಗದ ಅಂಧಕಾರವನ್ನು ಎದುರಿಸುತ್ತಿರುವ ಯುವಕರು ಮತ್ತು ಅವರ ಕುಟುಂಬಗಳಿಗೆ ಒಗ್ಗಟ್ಟನ್ನು ಬಿಂಬಿಸುವ ಸಲುವಾಗಿ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪಗಳನ್ನು ಸ್ವಿಚ್ ಆಫ್ ಮಾಡುವ ಮೂಲಕ ಕ್ರಾಂತಿಯ ಟಾರ್ಚ್ ಅನ್ನು ಬೆಳಗಿಸೋಣ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಆಡಳಿತಾರೂಢ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಪದವಿ ಪಡೆದ ಸಾವಿರಾರು ಪ್ರತಿಭಾವಂತ ಯುವಕರು ಉದ್ಯೋಗವಿಲ್ಲದೇ ಅಲೆದಾಡುತ್ತಿದ್ದಾರೆ. ಆಳುವ ಸರ್ಕಾರ ನೋಡಿಯೂ ನೋಡದಂತೆ ಕಣ್ಣುಮುಚ್ಚಿ ಕುಳಿತಿದೆ ಎಂದು ಟೀಕಿಸಿದ್ದಾರೆ.
-
मुट्ठियां जब बंध जाती हैं नौजवानों की
— Akhilesh Yadav (@yadavakhilesh) September 9, 2020 " class="align-text-top noRightClick twitterSection" data="
नींद उड़ जाती है ‘ज़ुल्मी हुक्मरानों’ की
आइए युवाओं व उनके परिवार की बेरोज़गारी-बेकारी के इस अंधेरे में हम आज रात 9 बजे, 9 मिनट के लिए बत्तियां बुझाकर क्रांति की मशाल जलाएं, उनकी आवाज़ में आवाज़ मिलाएं!#9Baje9Minute#9बजे9मिनट#NoMoreBJP
">मुट्ठियां जब बंध जाती हैं नौजवानों की
— Akhilesh Yadav (@yadavakhilesh) September 9, 2020
नींद उड़ जाती है ‘ज़ुल्मी हुक्मरानों’ की
आइए युवाओं व उनके परिवार की बेरोज़गारी-बेकारी के इस अंधेरे में हम आज रात 9 बजे, 9 मिनट के लिए बत्तियां बुझाकर क्रांति की मशाल जलाएं, उनकी आवाज़ में आवाज़ मिलाएं!#9Baje9Minute#9बजे9मिनट#NoMoreBJPमुट्ठियां जब बंध जाती हैं नौजवानों की
— Akhilesh Yadav (@yadavakhilesh) September 9, 2020
नींद उड़ जाती है ‘ज़ुल्मी हुक्मरानों’ की
आइए युवाओं व उनके परिवार की बेरोज़गारी-बेकारी के इस अंधेरे में हम आज रात 9 बजे, 9 मिनट के लिए बत्तियां बुझाकर क्रांति की मशाल जलाएं, उनकी आवाज़ में आवाज़ मिलाएं!#9Baje9Minute#9बजे9मिनट#NoMoreBJP
ರಾಜ್ಯದ ಯುವ ಸಮೂದಾಯ ಮಾಡಿದ ತಪ್ಪಾದರೂ ಏನು ಎಂದು ಪ್ರಶ್ನಿಸಿರುವ ಅಖಿಲೇಶ್, ಅವರಿಗೆ ಉದ್ಯೋಗ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಮತಿಮೀರಿದೆ. ಈ ನಿಟ್ಟಿನಲ್ಲಿ ನಿರುದ್ಯೋಗಿ ಯುವಕರ ಸಂಕಷ್ಟಗಳನ್ನು ಎತ್ತಿ ತೋರಿಸುವ ಮೂಲಕ ಇಂದು ರಾತ್ರಿ ಸಂಕೇತವಾಗಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.