ಹೈದರಾಬಾದ್(ತೆಲಂಗಾಣ): ದೇಶಾದ್ಯಂತ ಕೊರೊನಾ ಮಾಹಾಮಾರಿಯಿಂದ ಈಗಾಗಲೇ ಸಾವಿರಾರು ಜನರು ಸಾವನ್ನಪ್ಪಿದ್ದು, ಅದರ ಮಧ್ಯೆ ಕೆಲವರು ಪವಾಡ ಸದೃಶ ರೂಪದಲ್ಲಿ ಗುಣಮುಖರಾಗುತ್ತಿದ್ದಾರೆ.
ಮಹಾಮಾರಿ ಕೋವಿಡ್ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 94 ವರ್ಷದ ವೃದ್ಧೆಯೋರ್ವರು ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವಿಜಯಲಕ್ಷ್ಮೀ, ಹೈದರಾಬಾದ್ನ ಚಿಕ್ಕಡಪಲ್ಲಿಯಲ್ಲಿ ವಾಸವಾಗಿದ್ದು, ಸೋಂಕು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತು.
ಅವರು ತಿಳಿಸಿರುವ ಪ್ರಕಾರ, ಪ್ರತಿದಿನ ನರ್ಸ್, ವೈದ್ಯರು ತಪಾಸಣೆಗಾಗಿ ಬರುತ್ತಿದ್ದು, ತಮ್ಮನ ಸರಿಯಾಗಿ ನೋಡಿಕೊಂಡಿದ್ದಾರೆ ಎಂದಿದ್ದಾರೆ. ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಕರ್ಯವಿದ್ದು, ಉತ್ತಮ ರೀತಿಯ ಆಹಾರ ಒದಗಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ತೆಲಂಗಾಣದಲ್ಲಿ ನಿನ್ನೆ ಬರೋಬ್ಬರಿ 1,831 ಹೊಸ ಪ್ರಕರಣ ಕಾಣಿಸಿಕೊಂಡಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 25,733 ಪ್ರಕರಣಗಳಲ್ಲಿ 10,646 ಸಕ್ರಿಯ ಪ್ರಕರಣಗಳಿದ್ದು, 14,781 ಜನರು ಡಿಸ್ಚಾರ್ಜ್ ಆಗಿದ್ದಾರೆ.