ಶ್ರೀನಗರ: ಪಿಕ್ನಿಕ್ಗೆ ತೆರಳುತ್ತಿದ್ದ ವೇಳೆ ಮಿನಿಬಸ್ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ 9 ಬಾಲಕಿಯರು ಸೇರಿ 11 ವಿದ್ಯಾರ್ಥಿಗಳು ಅಸುನೀಗಿರುವ ಘಟನೆ ಜಮ್ಮ ಮತ್ತು ಕಾಶ್ಮೀರದಲ್ಲಿ ನಡೆದಿದೆ.
ಪೂಂಚ್ ಮೂಲಕ ಕಂಪ್ಯೂಟರ್ ಕೋಚಿಂಗ್ ಸಂಸ್ಥೆಯ ವಿದ್ಯಾರ್ಥಿಗಳು ಪಿಕ್ನಿಕ್ಗೆ ಎಂದು ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಪೀರ್ ಕಿ ಗಾಲಿ ಎಂಬ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಮಿನಿಬಸ್ ಆಯತಪ್ಪಿ ಕಂದಕಕ್ಕೆ ಉರುಳಿತು ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು, ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ 7 ಮಂದಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ.
ಘಟನೆ ನಡೆದ ರಸ್ತೆಯು ಈ ಮೊದಲು ಹಿಮದಿಂದ ಆವೃತ್ತವಾಗಿ, ಬಂದ್ ಆಗಿತ್ತು ಎಂದು ತಿಳಿದು ಬಂದಿದೆ.