ETV Bharat / bharat

ಸೋಷಿಯಲ್​ ಮೀಡಿಯಾದಲ್ಲಿ ದ್ವೇಷ ಹರಡುವ ಪ್ರಚೋದನಾ ಪೋಸ್ಟ್​: 89 ಮಂದಿ ಬಂಧನ - ಪೊಲೀಸ್ ಪ್ರಧಾನ ಕಚೇರಿ

ಜಾರ್ಖಂಡ್​ನ ರಾಂಚಿಯಲ್ಲಿ ದ್ವೇಷ ಹರಡುವಂತಹ ಪ್ರಚೋದನಾಕಾರಿ ಹಾಗೂ ವದಂತಿ ಪೋಸ್ಟ್​ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧ 89 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

89 arrested in Jharkhand for posting hate-content on social media, rumour-mongering
ಸಾಮಾಜಿಕ ಜಾಲತಾಣದಲ್ಲಿ ದ್ವೇಷದ ವಿಚಾರ, ವದಂತಿ ಪೋಸ್ಟ್: 89 ಮಂದಿ ಬಂಧನ
author img

By

Published : Apr 18, 2020, 4:35 PM IST

ರಾಂಚಿ (ಜಾರ್ಖಂಡ್‌): ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವಂತಹ ಪ್ರಚೋದನಾಕಾರಿ ಪೋಸ್ಟ್ ಮತ್ತು ವದಂತಿಗಳನ್ನು ಹಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 89 ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪೊಲೀಸ್ ಪ್ರಧಾನ ಕಚೇರಿಯ ದಾಖಲೆಗಳ ಪ್ರಕಾರ, ಧನ್​ಬಾದ್, ಪಲಮೌ ಮತ್ತು ಗರ್ಹ್ವಾ ಜಿಲ್ಲೆಗಳಲ್ಲಿ ಅತೀ ಹೆಚ್ಚು ಆರೋಪಿಗಳು ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 8 ಆಪಾದಿತರನ್ನು ವಶಕ್ಕೆ ಪಡೆಯಲಾಗಿದೆ.

ಸುಳ್ಳು ಸುದ್ದಿ, ಜನರನ್ನು ದಾರಿ ತಪ್ಪಿಸುವಂತಹ ತಪ್ಪು ಮಾಹಿತಿ ಮತ್ತು ದ್ವೇಷದ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವವರ ವಿರುದ್ಧ, ಭಾರತೀಯ ದಂಡ ಸಂಹಿತೆ (ಐಪಿಸಿ) ಕಾಯ್ದೆಯ ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.