ETV Bharat / bharat

ದೇಶದಲ್ಲಿ ಲಾಕ್​ಡೌನ್​ ವಿಸ್ತರಿಸಿ ಅಂತಿದ್ದಾರೆ ಶೇ.88 ರಷ್ಟು ಜನ: ಸರ್ವೆ ವರದಿ - ಪೋಲ್

ಏಪ್ರಿಲ್ 14 ರಂದು ಕೊನೆಗೊಳ್ಳಲಿರುವ ಲಾಕ್​ಡೌನ್​ ಅವಧಿ ವಿಸ್ತರಿಸಬೇಕು ಅನ್ನೋದು ಬಹುತೇಕರ ಅಭಿಪ್ರಾಯವಾಗಿದೆ. ಗುರುವಾರ ನಡೆಸಲಾದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

lockdown should be extended
lockdown should be extended
author img

By

Published : Apr 9, 2020, 7:37 PM IST

ಹೊಸದಿಲ್ಲಿ: ಕೊರೊನಾ ವೈರಸ್​ ಹರಡುವಿಕೆಯನ್ನು ತಡೆಯಲು ದೇಶದಲ್ಲಿ ವಿಧಿಸಲಾಗಿರುವ 21 ದಿನಗಳ ಲಾಕ್​ಡೌನ್​ ಏ.14 ರಂದು ಅಂತ್ಯವಾಗಲಿದ್ದು, ಲಾಕ್​ಡೌನ್​ ಇನ್ನೂ ಕೆಲ ಅವಧಿಗೆ ಮುಂದುವರಿಸಬೇಕೆಂದು ಶೇ.88 ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ನಡೆಸಲಾದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಆ್ಯಪ್​ವೊಂದರ ಮೂಲಕ ನಡೆಸಲಾದ ಈ ಪೋಲ್​ನಲ್ಲಿ 40,000 ಜನ ಅಭಿಪ್ರಾಯ ಹಂಚಿಕೊಂಡಿದ್ದು, ಶೇ.92 ರಷ್ಟು ಜನ ಕೋವಿಡ್​-19 ಟೆಸ್ಟ್​ ನಡೆಸಲು ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ನೀಡಬೇಕೆಂದು ಹೇಳಿದ್ದಾರೆ. ಆನ್ಲೈನ್ ಆ್ಯಪ್​ಗಳ ಮೂಲಕ ಆಹಾರ ಆರ್ಡರ್ ಮಾಡುವುದನ್ನು ಬಿಟ್ಟಿರುವುದಾಗಿ ಶೇ.88 ರಷ್ಟು ಜನ ಹೇಳಿದ್ದು ಸಹ ಗಮನಾರ್ಹವಾಗಿದೆ.​

"ಕೋವಿಡ್​-19 ಹರಡದಂತೆ ತಡೆಯಲು ಲಾಕ್​ಡೌನ್​ ಒಂದೇ ಪರಿಣಾಮಕಾರಿ ವಿಧಾನವಾಗಿದೆ" ಎಂದು ಬಹುತೇಕರ ಅಭಿಪ್ರಾಯವಾಗಿದ್ದು, ಏ.14 ರ ನಂತರವೂ ಲಾಕ್​ಡೌನ್​ ಮುಂದುವರಿಯಲಿ ಎಂದು ಶೇ.88 ರಷ್ಟು ಜನ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.