ವಿಶಾಖಪಟ್ಟಣ: ಕೊರೊನಾ ವೈರಸ್ ಭೀತಿ ಪರಿಣಾಮ ಫಿಲಿಪ್ಪಿನ್ಸ್ ಸೇರಿದಂತೆ ವಿವಿಧ ದೇಶಗಳಲ್ಲಿ ಓದುತ್ತಿರುವ 80ಕ್ಕೂ ಹೆಚ್ಚು ತೆಲುಗು ವಿದ್ಯಾರ್ಥಿಗಳು 40 ಗಂಟೆಗಳಿಂದ ವಿಮಾನ ನಿಲ್ದಾಣದಲ್ಲೇ ಸಿಲುಕಿಕೊಂಡಿದ್ದಾರೆ. ಇಷ್ಟೂ ವಿದ್ಯಾರ್ಥಿಗಳು ಊಟ, ನೀರಿಲ್ಲದೆ ಪರದಾಡುತ್ತಿದ್ದು, ಅಲ್ಲಿನ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ.
ವಿವಿಧ ದೇಶಗಳಿಂದ 185 ವಿದ್ಯಾರ್ಥಿಗಳು ಮನಿಲಾ ವಿಮಾನ ನಿಲ್ದಾಣದ ಮೂಲಕ ಆಂಧ್ರಪ್ರದೇಶದ ವಿಶಾಖಪಟ್ಟಣ ವಿಮಾಣ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇನ್ನೂ 80 ಮಂದಿ (ಆಂಧ್ರಪ್ರದೇಶ, ತೆಲಂಗಾಣ) ಭಾರತಕ್ಕೆ ಮರಳಲು ಕಾಯುತ್ತಿದ್ದಾರೆ. ಇವರೆಲ್ಲರೂ ಕೌಲಾಲಂಪುರಕ್ಕೆ ಬರಲು ಏರ್ ಏಷ್ಯಾ ವಿಮಾನಗಳನ್ನು ಕಾಯ್ದಿರಿಸಿದ್ದರು. ಆದರೆ, ಭಾರತೀಯ ವಿಮಾನಗಳನ್ನು ಮಂಗಳವಾರದಿಂದಲೇ ರದ್ದುಪಡಿಸಲಾಗಿದೆ.
ವಿದ್ಯಾರ್ಥಿಗಳ ಮನವಿಗೆ ಫಿಲಿಪ್ಪಿನ್ಸ್ನ ಭಾರತೀಯ ರಾಯಭಾರ ಕಚೇರಿ ಸ್ಪಂದಿಸದ ಕಾರಣ ವಿದ್ಯಾರ್ಥಿಗಳ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳನ್ನು ವಿಮಾನ ನಿಲ್ದಾಣದಿಂದ ಹೊರ ಹಾಕಲು ಪ್ರಾಧಿಕಾರ ಪ್ರಯತ್ನಿಸುತ್ತಿದೆ. ಆದರೆ, ವಿದ್ಯಾರ್ಥಿಗಳು ನಮ್ಮನ್ನು ಭಾರತಕ್ಕೆ ಕರೆದೊಯ್ಯುವವರೆಗೂ ವಿಮಾನ ನಿಲ್ದಾಣದಲ್ಲಿಯೇ ಇರುವುದಾಗಿ ಪಟ್ಟುಹಿಡಿದ್ದಾರೆ.