ಪಾಲಕ್ಕಾಡ್ : ನಿನ್ನೆ ಜವರಾಯನ ಅಟ್ಟಹಾಸಕ್ಕೆ ಎಂಟು ಜನರು ಬಲಿಯಾಗಿದ್ದಾರೆ. ಹೀಗೆ ಮೃತಪಟ್ಟ ಕೆಲವರು ಮೊದಲು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ತೆರಳುತ್ತಿದ್ದರು. ದುರಾದೃಷ್ಟ ಎಂದರೆ ಜವರಾಯ ಅವರನ್ನ ಬೆನ್ನು ಬಿದಿದ್ದಾ ಅಂತಾ ಕಾಣಿಸುತ್ತಿದೆ. ಜೀವ ಉಳಿಸಲು ರೋಗಿಗಳನ್ನ ಹೊತ್ಯೋಯ್ಯುತ್ತಿದ್ದ ಆ್ಯಂಬುಲೆನ್ಸ್ ಅಪಘಾತಕ್ಕೀಡಾಗಿ ಬಿಟ್ಟಿತು.
ಹೌದು, ನಿನ್ನೆ ಆ್ಯಂಬುಲೆನ್ಸ್- ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಎಂಟು ಜನರು ದಾರುಣವಾಗಿ ಮೃತಪಟ್ಟಿದ್ದರು. ಅದಕ್ಕೂ ಮುನ್ನ ಕೆಲವರು ಮತ್ತೊಂದು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದವರು ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ ಪಾಲಕ್ಕಾಡ್ ಸಮೀಪದ ನೆಲ್ಲಿಯಂಪಥಿಗೆ ಕೆಲವರು ವಿವಾಹಯಾತ್ರೆಗೆ ತೆಳಿದ್ದರು. ಈ ವೇಳೆ ಅಪಘಾತ ಸಂಭವಿಸಿತ್ತು. ಗಾಯಾಳುಗಳನ್ನು ನೆನ್ಮಾರ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರ ಸಂಬಂಧಿಗಳು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್ ಮೂಲಕ ತೆರಳಿದ್ದಾಗ ಈ ಅಪಘಾತ ಸಂಭವಿಸಿದೆ.
ಪಾಲಕ್ಕಾಡ್ನ ತಾನಿಸ್ಸೇರಿಯಲ್ಲಿ ಮೀನು ಸಾಗಿಸುತ್ತಿದ್ದ ಲಾರಿ ಹಾಗೂ ಆ್ಯಂಬುಲೆನ್ಸ್ ಮಧ್ಯೆ ಅಪಘಾತ ಸಂಭವಿಸಿ ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಗಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರು ಇಲ್ಲಿನ ಪಟ್ಟಂಬಿ ನಿವಾಸಿಗರೆಂದು ಗುರುತಿಸಲಾಗಿದೆ. ಮೃತಪಟ್ಟ ಎಂಟು ಜನರಲ್ಲಿ ಮೂವರನ್ನು ನಾಸ್ಸಿರ್, ಫವಸ್ ಮತ್ತು ಸುಬೈರ್ ಎಂದು ಪತ್ತೆ ಹಚ್ಚಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಕ್ರಮ ಕೈಗೊಂಡಿದ್ದಾರೆ.