ಗಾಂಧಿನಗರ (ಗುಜರಾತ್): ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಹೊರಗಿನವರ ಸಂಪರ್ಕ ಇಲ್ಲದಿದ್ದರೂ ಎಂಟು ಮಂದಿ ಕೈದಿಗಳಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.
2019ರ ಕೊಲೆ ಆರೋಪಿ ಮನುಭಾಯ್ ದೇಸಾಯಿ ಎಂಬಾತನಿಗೆ ಗುಜರಾತ್ ಹೈಕೋರ್ಟ್‌ನಲ್ಲಿ ಜಾಮೀನು ಸಿಕ್ಕಿತ್ತು. ಮನೆಗೆ ಕಳುಹಿಸುವ ಮೊದಲು ಪರೀಕ್ಷೆಗೆ ಒಳಪಡಿಸಿದಾಗ ಮನುಭಾಯ್ ಸೇರಿದಂತೆ 8 ಕೈದಿಗಳಲ್ಲಿ ಕೊರೊನಾ ಪತ್ತೆಯಾಗಿದೆ.
ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವಿಲ್ಲದ ಕೈದಿಗಳಿಗೆ ಜೈಲಿನೊಳಗೆ ಕೊರೊನಾ ಸೋಂಕು ತಗುಲಿರುವ ಮೊದಲ ನಿದರ್ಶನ ಇದಾಗಿದೆ. ಕೋವಿಡ್ ದೃಢಪಟ್ಟ ಯಾವೊಬ್ಬ ಕೈದಿಯಲ್ಲೂ ಅದರ ಲಕ್ಷಣಗಳು ಕಂಡು ಬಂದಿಲ್ಲವಂತೆ. ಇದೀಗ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.