ETV Bharat / bharat

2ನೇ ವಿಶ್ವಯುದ್ಧದಲ್ಲಿ ಹೋರಾಡಿ ಮಡಿದ ನಮ್ಮ ಯೋಧರು! 7 ದಶಕಗಳ ನಂತರ ಅಂತ್ಯಕ್ರಿಯೆ! - undefined

ಹರ್ಯಾಣದ ಹಿಸ್ಸಾರ್‌ ಮೂಲದ ಯೋಧ ಪಾಲು ರಾಮ್​ ಹಾಗೂ ಝಜ್ಜರ್​ನ ಹರಿಸಿಂಗ್ ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದರು. ಇಟಲಿಯ ಪೊಗ್ಗಿಯೊ ಆಲ್ಟೋದಲ್ಲಿ ಇಬ್ಬರೂ 1944 ಸೆಪ್ಟೆಂಬರ್​ 13ರಂದು ನಾಪತ್ತೆಯಾಗಿದ್ದರು. ಇದೀಗ ಅವರಿಗೆ ಸ್ವಗ್ರಾಮದಲ್ಲಿ ಏಳು ದಶಕಗಳ ಬಳಿಕ ಕುಟುಂಬದವರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಹರ್ಯಾಣ
author img

By

Published : Jun 4, 2019, 12:54 PM IST

ಹಿಸ್ಸಾರ್‌ (ಹರ್ಯಾಣ): ಎರಡನೇ ಮಹಾಯುದ್ಧದಲ್ಲಿ ಹೋರಾಡಿ, ಮಡಿದ ಇಬ್ಬರು ಸಿಪಾಯಿಗಳ ಅಸ್ಥಿಯನ್ನು 75 ವರ್ಷಗಳ ನಂತರ ಸ್ವಗ್ರಾಮಗಳಿಗೆ ತಂದು, ಧಾರ್ಮಿಕ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಹರ್ಯಾಣದ ಮೂಲದ ಯೋಧರುಗಳಾದ ಹಿಸ್ಸಾರ್‌​ನ ಪಾಲುರಾಮ್​ ಹಾಗೂ ಝಜ್ಜರ್​ನ ಹರಿಸಿಂಗ್ ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದರು. ಇಟಲಿಯ ಪೊಗ್ಗಿಯೊ ಆಲ್ಟೋದಲ್ಲಿ ಇಬ್ಬರೂ 1944 ಸೆಪ್ಟೆಂಬರ್​ 13ರಂದು ನಾಪತ್ತೆಯಾಗಿದ್ದರು. ಇದೀಗ ಅವರಿಗೆ ಸ್ವಗ್ರಾಮದಲ್ಲಿ, ಕುಟುಂಬದವರಿಂದ ಅಂತ್ಯಕ್ರಿಯೆ ನಡೆದಿದೆ.

72 ವರ್ಷಗಳ ನಂತರ ಸ್ವಗ್ರಾಮದಲ್ಲಿ ಸಿಪಾಯಿಗಳಿಗೆ ಅಂತ್ಯಕ್ರಿಯೆ!

ನಮ್ಮ ಹಿರಿಯರು ದ್ವಿತೀಯ ಮಹಾಯುದ್ಧ(1939-45)ದಲ್ಲಿ ಭಾಗವಹಿಸಿದ್ದರು ಎಂಬುದು ಹೆಮ್ಮೆಯ ಸಂಗತಿ. ಧಾರ್ಮಿಕ ವಿಧಾನದಂತೆ ಅವರ ಅಸ್ಥಿ ತಂದು, ಅಂತ್ಯಕ್ರಿಯೆ ನೆರವೇರಿಸಿದ್ದೇವೆ ಎಂದು ಪಾಲಿ ರಾಮ್ ಅವರ ಸಂಬಂಧಿ ರಮೇಶ್​ ಕೋತ್​ ಹೇಳಿದರು.

ದ್ವಿತೀಯ ಮಹಾಯುದ್ಧದಲ್ಲಿ ಭಾಗವಹಿಸಿದಾಗ ಪಾಲುರಾಮ್ ಅವರಿಗೆ 19 ವರ್ಷವಾಗಿತ್ತು. ಬ್ರಿಟಿಷ್​ ಇಂಡಿಯನ್ ಸೇನೆಯ 13ನೇ ಫ್ರಂಟಿಯರ್‌ ಫೋರ್ಸ್​ ರೈಫಲ್ಸ್​ನ 4ನೇ ಬೆಟಾಲಿಯನ್​ನಲ್ಲಿ ಸೈನಿಕರಾಗಿ ಹೋರಾಡಿದ್ದರು ಎಂದು ಅವರು ಮಾಹಿತಿ ನೀಡಿದರು.

ಕಳೆದ ವರ್ಷ ಭಾರತೀಯ ಸೇನೆ ಈ ಇಬ್ಬರು ಯೋಧರ ಅಸ್ಥಿ ಪಡೆದುಕೊಳ್ಳಲಾಗಿದೆ ಎಂದಾಗ ಆಶ್ಚರ್ಯವಾಯ್ತು. ನಮ್ಮ ತಾತ ಪಾಟ್‌ರಾಮ್​, ಪಾಲುರಾಮ್​ರ ಮರಣಾನಂತರ ಪಿಂಚಣಿ ಪಡೆಯುತ್ತಿದ್ದ ದಾಖಲೆಯಿಂದ ನಮ್ಮನ್ನು ಸಂಪರ್ಕಿಸಿದರು ಎಂದರು.

ಯೋಧರ ಅಸ್ಥಿ ಪತ್ತೆಯಾಗಿದ್ದು ಹೇಗೆ?

ಸಿಪಾಯಿಗಳ ಮೂಳೆಗಳು 1966ರಲ್ಲಿ ಇಟಲಿಯ ಪಾಗ್ಗಿಯೊ ಆಲಟೋದಲ್ಲಿ ಪತ್ತೆಯಾಗಿದ್ದವು. 2010ರಲ್ಲಿ ಇಟಲಿ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಮುಂದಾದರು. 2012ರಲ್ಲಿ ಡಿಎನ್​ಎ ಪರೀಕ್ಷೆ ನಡೆಸಿದಾಗ ಯುರೋಪಿನವರಲ್ಲದ, 20-21 ವರ್ಷದ ಯುವಕರು ಎಂದು ತಿಳಿದುಬಂದಿತ್ತು. ಆ ನಂತರ ಇವು ಪಾಲುರಾಮ್ ಹಾಗೂ ಹರಿಸಿಂಗ್​ ಕಳೇಬರ​ ಎಂಬುದು ದೃಢಪಟ್ಟಿತ್ತು.

ವಾಯುಪಡೆಯ ವೈಸ್​ ಮಾರ್ಷಲ್​ ಬಕುಲ್ ಉಪಾಧ್ಯಾಯರ ತಂಡವು ಇಟಲಿಗೆ ತೆರಳಿ, ಸೇನಾ ಗೌರವದೊಂದಿಗೆ ಇಬ್ಬರ ಅಸ್ಥಿಯನ್ನು ಸ್ವದೇಶಕ್ಕೆ ತಂದಿದ್ದರು. ಝಜ್ಜರ್​ ಗ್ರಾಮಕ್ಕೆ ಸಿಪಾಯಿಯ ಅಸ್ಥಿ​ ತಂದ ವೇಳೆ, ಕೃಷಿ ಸಚಿವ ಓಂ ಪ್ರಕಾಶ್​ ಧನ್ಕರ್​ ಹಾಜರಿದ್ದು, ಗೌರವ ಸಮರ್ಪಿಸಿದರು.

Intro:Body:

https://etvbharat.page.link/Y8N1YbbbJYRNNoyx6

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.