ಬರೇಲಿ(ಉತ್ತರ ಪ್ರದೇಶ): ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಕ್ಕಾಗಿ 75 ವರ್ಷದ ವ್ಯಕ್ತಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ನ್ಯಾಯಾಲಯವು ಶನಿವಾರ ಅಶ್ಫಾಕ್ ಅಹ್ಮದ್ ಅಲಿಯಾಸ್ ಅಲ್ಲಾ ರಾಖಾಗೆ 20,000 ರೂ.ಗಳ ದಂಡವನ್ನು ವಿಧಿಸಿದೆ ಮತ್ತು ಬಾಲಕಿಗೆ ಅರ್ಧದಷ್ಟು ಹಣವನ್ನು ಪಾವತಿಸುವಂತೆ ನಿರ್ದೇಶಿಸಿದೆ.
10 ವರ್ಷಗಳ ಹಿಂದೆ ಅಹ್ಮದ್, ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ ಎಂದು ಸರ್ಕಾರಿ ವಕೀಲ ಸುರೇಶ್ ಬಾಬು ಸಾಹು ಹೇಳಿದ್ದಾರೆ. "ನ್ಯಾಯಾಲಯವು ಅಹ್ಮದ್‌ಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 20,000 ರೂ.ಗಳ ದಂಡವನ್ನು ವಿಧಿಸಿತು" ಎಂದು ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ, ಬಾಲಕಿಯ ತಂದೆ ಕೃತ್ಯ ನಡೆಸಿದ ವ್ಯಕ್ತಿಯ ಪುತ್ರನಿಗೆ ವಿಚಾರ ತಿಳಿಸಿದ್ದಾರೆ. ಆದರೆ ಆತ ಬಾಲಕಿಯ ತಂದೆಯನ್ನೇ ನಿಂದಿಸಿದ್ದಾನೆ. ನಂತರ ಹುಡುಗಿಯ ತಂದೆ, ಅಹ್ಮದ್ ಮತ್ತು ಆತ ಪುತ್ರನ ವಿರುದ್ಧ ದೂರು ದಾಖಲಿಸಿದ್ದರು ಎಂದು ವಕೀಲರು ಮಾಹಿತಿ ನೀಡಿದ್ದಾರೆ.