ETV Bharat / bharat

ಶೇ.72ರಷ್ಟು ಕೋವಿಡ್​ ಸಂಬಂಧಿತ ಸೈಬರ್​ ದಾಳಿಗೆ ಇ-ಮೇಲ್ ಖಾತೆಯೇ ರಹದಾರಿ

author img

By

Published : Dec 20, 2020, 4:11 PM IST

Updated : Dec 20, 2020, 4:49 PM IST

ಕೋವಿಡ್​ ಸಂಬಂಧಿತ ಶೇ.72 ರಷ್ಟು ಸೈಬರ್​ ದಾಳಿಗಳು ಅಥವಾ ಫಿಶಿಂಗ್ ಅಟ್ಯಾಕ್​ಗಳು ಇ-ಮೇಲ್​ ಮುಖಾಂತರವೇ ನಡೆಯುತ್ತಿದೆ. ವ್ಯಕ್ತಿಗಳನ್ನು ಮೋಸದ ಬಲೆಗೆ ಕೆಡವಲು ಅವರ ವಿಶ್ವಾಸಾರ್ಹ ವ್ಯಕ್ತಿಗಳ ಇ-ಮೇಲ್ ಐಡಿ ಬಳಸಿಕೊಳ್ಳುತ್ತಿದ್ದಾರೆ.

Covid-related cyberattacks coming via fake emails
ಈ ಮೇಲ್ ಖಾತೆಗಳ ಮೂಲಕ ಸೈಬರ್​ ದಾಳಿ

ನವದೆಹಲಿ: ಕೋವಿಡ್​ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ಭಾರತ ಸೇರಿದಂತೆ ಜಗತ್ತಿನಾದ್ಯಂತ ರಾಷ್ಟ್ರಗಳಲ್ಲಿ ದೇಣಿಗೆ ಮತ್ತಿತರ ಹೆಸರಿನಲ್ಲಿ ಸೈಬರ್​ ದಾಳಿಗಳು ಹೆಚ್ಚಾಗುತ್ತಿದ್ದು, ಭಾರತದಲ್ಲಿ ವಿವಿಧ ಸಂಸ್ಥೆಗಳ ಇ-ಮೇಲ್ ಖಾತೆಗಳು ಸೈಬರ್​ ಖದೀಮರ ವಂಚನೆಗೆ ರಹದಾರಿಯಾಗಿದೆ.

ಕೋವಿಡ್​ ಸಂಬಂಧಿತ ಶೇ. 72 ರಷ್ಟು ಸೈಬರ್​ ದಾಳಿಗಳು ಅಥವಾ ಫಿಶಿಂಗ್ ಅಟ್ಯಾಕ್​ಗಳು ಮಿಂಚಂಚೆ​ ಮುಖಾಂತರವೇ ನಡೆಯುತ್ತಿದ್ದು, ವ್ಯಕ್ತಿಗಳನ್ನು ಮೋಸದ ಬಲೆಗೆ ಕೆಡವಲು ವಂಚಕರು ಅವರ ವಿಶ್ವಾಸಾರ್ಹ ವ್ಯಕ್ತಿಗಳ ಇ-ಮೇಲ್ ಐಡಿ ಬಳಸಿಕೊಳ್ಳುತ್ತಿದ್ದಾರೆ.

ಶೇ. 13 ರಷ್ಟು ಸೈಬರ್​ ದಂಧೆಕೋರರು ವಿವಿಧ ಸಂಸ್ಥೆಗಳ ಆಂತರಿಕ ವಿಶ್ವಾಸಾರ್ಹ ಇ-ಮೇಲ್ ಖಾತೆಗಳ ಮೂಲಕ ವಂಚನೆ ಮಾಡುತ್ತಿದ್ದಾರೆ. ಹೀಗಾಗಿ, ಸಂಸ್ಥೆಗಳು ಬಾಹ್ಯ ವಂಚನೆಯ ಇ-ಮೇಲ್​ ದಾಳಿಗಳನ್ನು ತಡೆಯಲು, ತಮ್ಮ ಇ-ಮೇಲ್ ಖಾತೆಗಳ ಭದ್ರೆತಯನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಕ್ಲೌಡ್​ ಸೆಕ್ಯರಿಟಿ ಸಂಸ್ಥೆ ಬಾರಾಕುಡಾ ನೆಟ್​ವರ್ಕ್​ನ ವರದಿ ತಿಳಿಸಿದೆ.

ಓದಿ: ಮಧ್ಯರಾತ್ರಿ ಅಪರಿಚಿತರು ವಿಡಿಯೊ ಕಾಲ್ ಮಾಡುತ್ತಿದ್ದಾರಾ..? ಕರೆ ಸ್ವೀಕರಿಸುವ ಮುನ್ನ ಈ ಸ್ಟೋರಿ ನೋಡಿ

ಬ್ಯುಸಿನೆಸ್​ ಇ-ಮೇಲ್ ಖಾತೆಗಳು ಸೈಬರ್​ ಖದೀಮರಿಗೆ ಹೆಚ್ಚು ಲಾಭದಾಯವಾಗಿರುವುದರಿಂದ ಈ ರೀತಿಯ ದಾಳಿಗಳು ಹೆಚ್ಚುತ್ತಿವೆ. ಕೋವಿಡ್​-19 ಬಗ್ಗೆ ಜನರಲ್ಲಿ ಭಯ ಹುಟ್ಟಿಸಿ, ಮೋಸದ ಖೆಡ್ಡಾಗೆ ಕೆಡವಿ ಸೈಬರ್​ ವಂಚಕರು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಿದ್ದಾರೆ.

ಸೈಬರ್​ ದಾಳಿಗಳಲ್ಲಿ ಶೇ.71 ರಷ್ಟು ಯುಆರ್​ಎಲ್ ಮುಖಾಂತರ ನಡೆದರೆ, ಇತರ ಶೇ. 30 ರಷ್ಟು ಬ್ಯುಸಿನೆಸ್​ ದಾಳಿಗಳು ಒಂದು ಲಿಂಕ್ ಮುಖಾಂತರ ನಡೆಯುತ್ತವೆ ಎಂದು ಸಂಶೋಧನೆಗಳು ಹೇಳಿವೆ. ​

Last Updated : Dec 20, 2020, 4:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.