ಉತ್ತರಪ್ರದೇಶ: ರಾಂಪುರ ಜಿಲ್ಲೆಯ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ವಿರುದ್ಧ ಭೂ ಮಾಫಿಯಾ ಆರೋಪವೂ ಸೇರಿದಂತೆ 72 ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಅವರ ಮತ್ತು ಪಕ್ಷದ ಲೋಕಸಭಾ ಸದಸ್ಯರ ಇತಿಹಾಸವನ್ನು ಕೆದಕಲು ಜಿಲ್ಲಾಡಳಿತ ಮತ್ತು ಪೊಲೀಸರು ಮುಂದಾಗಿದ್ದಾರೆ.
ಈ ವರ್ಷದ ಏಪ್ರಿಲ್ವರೆಗೂ ಈಗಾಗಲೇ 72 ಪ್ರಕರಣಗಳು ದಾಖಲಾಗಿದ್ದು, ಆ ಬಳಿಕ ಮತ್ತಷ್ಟು ಕೇಸ್ಗಳು ದಾಖಲಾಗಿವೆ ಎನ್ನಲಾಗಿದೆ. ಅಪರಾಧ, ಭೂ ಕಬಳಿಕೆ, ಕಳ್ಳತನದ ಆರೋಪವೂ ಸೇರಿದಂತೆ ಹಲವು ಪ್ರಕರಣಗಳು ಅಜಂ ಖಾನ್ ವಿರುದ್ಧ ದಾಖಲಾಗಿವೆ. ಅಜಂ ಖಾನ್ ಅವರ ಇತಿಹಾಸದ ಪುಟಗಳನ್ನು ತೆರೆಯಲು ನಿರ್ಧರಿಸಿದ್ದೇವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಂಜನೇಯ ಕುಮಾರ್ ಸಿಂಗ್ ಹೇಳಿದ್ದಾರೆ.
ಈಗಾಗಲೇ ಪೊಲೀಸರು 72 ಪ್ರಕರಣಗಳಲ್ಲಿ 15 ಪ್ರಕರಣಗಳಿಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಉಳಿದವುಗಳ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.