ಮುಂಬೈ: 10 ವರ್ಷ ಹಳೆಯದಾದ ಏಳಂತಸ್ತಿನ ಕಟ್ಟಡವೊಂದು ದಿಢೀರ್ ಕುಸಿದಿರುವ ಘಟನೆ ಇಲ್ಲಿನ ಡೊಂಗ್ರಿ ಪ್ರದೇಶದಲ್ಲಿ ಇಂದು ನಸುಕಿನಜಾವ ಸಂಭವಿಸಿದೆ.
ಕುಸಿದ ಕಟ್ಟಡ ಅವಶೇಷಗಳಡಿ ಮಹಿಳೆವೋರ್ವರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಅವಘಡ ಸಂಭವಿಸುತ್ತಿದ್ದಂತೆ ಅಲ್ಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಿಲಾಗಿದೆ. ಆದ್ರೆ ಅವರಿಗೆ ಸಂಬಂಧಿಸಿದ ವಸ್ತುಗಳು ಕುಸಿದ ಕಟ್ಟಡದೊಳಗೆ ಹುದುಗಿಹೋಗಿವೆ.
ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.