ಹೈದರಾಬಾದ್(ತೆಲಂಗಾಣ): ಇಲ್ಲಿನ ಆಸ್ಪತ್ರೆಯಲ್ಲೊಂದರಲ್ಲಿ 7 ದಿನದ ಹಸುಗೂಸನ್ನೇ ರಕ್ಕಸಿ ಕೊರೊನಾ ಬಲಿ ಪಡೆದಿದೆ. ವಿಚಿತ್ರ ಅಂದ್ರೆ, ಈ ಶಿಶುವಿನ ತಾಯಿಗೆ ಕೋವಿಡ್ -19 ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಅನ್ನೋದು.
ತಾಯಿಗಿಲ್ಲದ ಕೊರೊನಾ ಮಗುವಿಗೆ ತಗುಲಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಇದು ರಾಜ್ಯದಲ್ಲಿ ಕೊರೊನಾ ಬಲಿಯಾದ ಅತಿ ಕಿರಿಯ ವಯಸ್ಸಿನ ಶಿಶು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಖುತಬುಲ್ಪುರದಿಂದ ಬಂದಿದ್ದ ಗರ್ಭಿಣಿಯನ್ನು ನಿಲೋಫರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆ ಆದ 7 ದಿನಗಳಲ್ಲೇ ಶಿಶುವನ್ನು ಮಹಾಮಾರಿ ಕೊರೊನಾ ಕರೆದೊಯ್ದಿದೆ.
ಮಗು- ತಾಯಿಗೆ ಕೊರೊನಾ ಟೆಸ್ಟ್ ಮಾಡಿದಾಗ ವರದಿ ನೆಗೆಟಿವ್ ಬಂದಿತ್ತು. ಅಲ್ಲದೆ, ಅವರ ಮನೆಯ ಸದಸ್ಯರಲ್ಲಿ ಯಾವುದೇ ಲಕ್ಷಣಗಳು ಸಹ ಕಾಣಿಸಿಕೊಂಡಿಲ್ಲ. ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಕೊರೊನಾ ತಗುಲಿರುವ ಶಂಕೆ ವ್ಯಕ್ತವಾಗಿದೆ. ಮಗು ಕೋವಿಡ್-19ಗೆ ಬಲಿಯಾದ ಬಳಿಕ ನಿಲೋಫರ್ ಆಸ್ಪತ್ರೆ ಇರುವ ವ್ಯಾಪ್ತಿಯನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.