ಗೌಹಾತಿ (ಅಸ್ಸಾಂ): ಕೊರೊನಾ ಕಾರಣಕ್ಕೆ ಅಸ್ಸಾಂನಲ್ಲಿ ಮೊದಲ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಹಿಮವಂತ ಬಿಸ್ವಾ ಶರ್ಮ ತಿಳಿಸಿದ್ದಾರೆ.
ಮೃತ ವ್ಯಕ್ತಿ 65 ವರ್ಷದ ಬಿಎಸ್ಎಫ್ ನಿವೃತ್ತ ಸಿಬ್ಬಂದಿಯಾಗಿದ್ದು ಹೈಲಕಂಡಿ ಜಿಲ್ಲೆಯವನಾಗಿದ್ದಾನೆ. ಸೋಂಕಿತನ ಸ್ಥಿತಿ ಗಂಭೀರವಾಗಿದ್ದ ಕಾರಣ ಸಿಲ್ಚಾರ್ ಆಸ್ಪತ್ರೆಯ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.
-
With utmost Grief and sorrow,I would like to inform that Sri Faijul Haque Barbhyan,(65)Hailakandi District has expired few minutes back in SMCH due to complication of COVID19 https://t.co/MoRWPP4Bml deep condolences and prayers for the bereaved family
— Himanta Biswa Sarma (@himantabiswa) April 9, 2020 " class="align-text-top noRightClick twitterSection" data="
">With utmost Grief and sorrow,I would like to inform that Sri Faijul Haque Barbhyan,(65)Hailakandi District has expired few minutes back in SMCH due to complication of COVID19 https://t.co/MoRWPP4Bml deep condolences and prayers for the bereaved family
— Himanta Biswa Sarma (@himantabiswa) April 9, 2020With utmost Grief and sorrow,I would like to inform that Sri Faijul Haque Barbhyan,(65)Hailakandi District has expired few minutes back in SMCH due to complication of COVID19 https://t.co/MoRWPP4Bml deep condolences and prayers for the bereaved family
— Himanta Biswa Sarma (@himantabiswa) April 9, 2020
ಮೃತನ ಅಂತ್ಯಸಂಸ್ಕಾರವನ್ನು ಕೋವಿಡ್-19 ಪ್ರೋಟೋಕಾಲ್ನ ಅನುಸಾರ ನಡೆಸಲಾಗಿದೆ ಎಂದು ಸಿಲ್ಚಾರ್ ಸಂಸದ ರಾಜದೀಪ್ ರಾಯ್ ಸ್ಪಷ್ಟನೆ ನೀಡಿದ್ದಾರೆ.
ಅಸ್ಸಾಂನಲ್ಲಿ ಕೆಲ ದಿನಗಳ ಹಿಂದೆ ಓರ್ವನಲ್ಲಿ ಸೋಂಕು ಪತ್ತೆಯಾಗಿದ್ದು, ಆತನ ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ಜೊತೆಗೆ ಸೌದಿ ಅರೇಬಿಯಾಗೂ ಪ್ರಯಾಣ ಬೆಳೆಸಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ.