ಮುಂಬೈ: 2020 ಟೋಕಿಯೋ ಒಲಿಂಪಿಕ್ನಲ್ಲಿ ಒಟ್ಟು 206 ರಾಷ್ಟ್ರಗಳ 11 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿಯಾಗಲಿದ್ದು, ಭಾರತದ ಅಥ್ಲೀಟ್ಸ್ಗಳು ಅದರಲ್ಲಿ ಭಾಗಿಯಾಗಲಿದ್ದಾರೆ.

ಜುಲೈ 24ರಿಂದ ಆಗಸ್ಟ್ 9ರವರೆಗೆ ನಡೆಯಲಿರುವ ಕ್ರೀಡಾ ಹಬ್ಬದಲ್ಲಿ ಎಲ್ಲ ದೇಶದ ಪ್ರಮುಖ ಕ್ರೀಡಾಪಟುಗಳು ಭಾಗಿಯಾಗಲಿದ್ದು, ಈ ಸ್ಪರ್ಧೆಯಲ್ಲಿ ಭಾಗಿಯಾಗಲು ಈಗಾಗಲೇ ಭಾರತದ 64 ಅಥ್ಲೀಟ್ಸ್ಗಳು ಅರ್ಹತೆ ಪಡೆದುಕೊಂಡಿದ್ದಾರೆ.

ಬಿಲ್ಲುಗಾರಿಕೆಯಲ್ಲಿ ತರುಂದೀಪ್ ರೈ, ಅಟನು ದಾಸ್ ಮತ್ತು ಪ್ರವೀಣ್ ಜಾಧವ್ ಅರ್ಹತೆ ಪಡೆದುಕೊಂಡಿದ್ದು, ಅಥ್ಲೆಟಿಕ್ಸ್ನಲ್ಲಿ ಇರ್ಫಾನ್ ಕೊಲೊತುಮ್ (ಪುರುಷರ 20 ಕಿ.ಮೀ ಓಟದ ಸ್ಪರ್ಧೆ), ಅವಿನಾಶ್ ಸೇಬಲ್ (ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್), ನೀರಜ್ ಚೋಪ್ರಾ (ಪುರುಷರ ಜಾವೆಲಿನ್ ಥ್ರೋ), ಭಾವನಾ ಜಾಟ್ (ಮಹಿಳಾ 20 ಕಿ.ಮೀ ಓಟದ ಸ್ಪರ್ಧೆ) ಮತ್ತು ಮುಹಮ್ಮದ್ ಅನಸ್, ವಿ.ಕೆ.ವಿಶ್ಮಯ ಮತ್ತು ಜಿಸ್ನಾ ನಥೆವಾ (4 * 400 ಮೀ ಮಿಶ್ರ ರಿಲೇ ತಂಡ) ಅವಕಾಶ ಪಡೆದುಕೊಂಡಿದ್ದಾರೆ.

ಹಾಕಿಯಲ್ಲೂ ಭಾರತ ಅವಕಾಶ ಪಡೆದುಕೊಂಡಿದ್ದು, ಅದರಲ್ಲಿ 16 ಕ್ರೀಡಾಪಟುಗಳಿರುತ್ತಾರೆ. ಶೂಟಿಂಗ್ನಲ್ಲಿ ಮನು ಭಾಕರ್,ಸೌರಭ್ ಚೌಧರಿ, ಅಭಿಷೇಕ್ ವರ್ಮಾ, ಪನ್ವಾರ್ ಹಾಗೂ ದೀಪಕ್ ಕುಮಾರ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಕುಸ್ತಿಯಲ್ಲಿ ರವಿ ಕುಮಾರ್, ಭಜರಂಗ್ ಪುನಿಯಾ, ದೀಪಕ್ ಪುನಿಯಾ ಮತ್ತು ವಿನೇಶ್ ಪೋಗಟ್ ಅರ್ಹತೆ ಪಡೆದುಕೊಂಡಿದ್ದಾರೆ.
