ETV Bharat / bharat

8 ಮಕ್ಕಳ ಬಿಟ್ಟು, 16 ವರ್ಷದ ಪ್ರಿಯಕರನ​ ಜೊತೆ ಪರಾರಿಯಾದ್ಲು 58ರ ಮಹಿಳೆ! - ಪೊಲೀಸ್​ ಪ್ರಕರಣ

ತಾಳಿ ಕಟ್ಟಿದ ಗಂಡ ಹಾಗೂ 8 ಮಂದಿ ಮಕ್ಕಳನ್ನು ಬಿಟ್ಟು 16 ವರ್ಷದ ಬಾಲಕನೊಂದಿಗೆ ಮಹಿಳೆಯೊಬ್ಬಳು ಓಡಿ ಹೋಗಿರುವ ವಿಚಿತ್ರ ಘಟನೆ ನಡೆದಿದೆ.

16 ವರ್ಷದ ಬಾಲಕನೊಂದಿಗೆ ಪರಾರಿ
author img

By

Published : Oct 2, 2019, 6:38 PM IST

ಡೆಹ್ರಾಡೂನ್​​: ಉತ್ತರಾಖಂಡದ ರೂಡಕಿಯಲ್ಲಿ ಪ್ರೀತಿಯ ಬಲೆಗೆ ಬಿದ್ದ 58 ವರ್ಷದ ವಿವಾಹಿತ ಮಹಿಳೆಯೋರ್ವಳು 16 ವರ್ಷದ ಪ್ರಿಯಕರನ​ ಜತೆ ಪರಾರಿಯಾಗಿರುವ ಘಟನೆ ನಡೆದಿದೆ. ಮಹಿಳೆಗೆ ಈಗಾಗಲೇ 8 ಜನ ಮಕ್ಕಳಿದ್ದು ಪ್ರಕರಣ ಕುತೂಹಲ ಕೆರಳಿಸಿದೆ.

16 ವರ್ಷದ ಬಾಲಕನೊಂದಿಗೆ ಪರಾರಿಯಾದ 58ರ ಮಹಿಳೆ!

ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಹರಾನ್​ಪುರದ 58 ವರ್ಷದ ಮಹಿಳೆ ಹಾಗೂ ಅದೇ ಗ್ರಾಮದ 16 ವರ್ಷದ ಬಾಲಕನ ನಡುವೆ ಪ್ರೇಮಾಂಕುರವಾಗಿದೆ. ಇಬ್ಬರೂ ಕೊನೆಯುಸಿರು ಇರುವವರೆಗೂ ಒಟ್ಟಿಗೆ ಜೀವನ ನಡೆಸೋಣ ಎಂದು ನಿರ್ಧಿಸಿದ್ದು ಮನೆ ಬಿಟ್ಟು ಪರಾರಿಯಾಗುತ್ತಿದ್ದರು. ಈ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನೂ ಹಿಡಿದ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಷ್ಟೆಲ್ಲ ಘಟನೆ ನಡೆದರೂ ಮಹಿಳೆ ತಾನು ಮೆಚ್ಚಿದ 16 ರ ಹರೆಯದ ಪ್ರಿಯಕರನ​ ಮನೆಯಲ್ಲೇ ವಾಸವಾಗಿದ್ದಾಗಿ ತಿಳಿದು ಬಂದಿದೆ.

Intro:Body:

8 ಮಕ್ಕಳು ಬಿಟ್ಟು, 16 ವರ್ಷದ ಲವರ್​ ಜೊತೆ ಪರಾರಿಯಾದ್ಲು 58ರ ಮಹಿಳೆ! 

ಡೆಹ್ರಾಡೂನ್​​: ಉತ್ತರಾಖಂಡದ ರೂಡಕಿಯಲ್ಲಿ ಪ್ರೀತಿಯ ಬಲೆಗೆ ಬಿದ್ದ 58 ವರ್ಷದ ವಿವಾಹಿತ ಮಹಿಳೆಯೋರ್ವಳು, 16 ವರ್ಷದ ಲವರ್​ ಜತೆ ಪರಾರಿಯಾಗಿರುವ ಘಟನೆ ನಡೆದಿದ್ದು, ಈಗಾಗಲೇ ಆಕೆಗೆ 8 ಜನ ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಸಹರಾನ್​ಪುರದ 58 ವರ್ಷದ ಮಹಿಳೆ ಹಾಗೂ ಅದೇ ಗ್ರಾಮದ 16 ವರ್ಷದ ಬಾಲಕನ ನಡುವೆ ಪ್ರೇಮಾಂಕುರವಾಗಿದೆ. ಕೊನೆ ಉಸಿರು ಇರುವವರೆಗೂ ಒಟ್ಟಿಗೆ ಜೀವನ ನಡೆಸೋಣ ಎಂದು ನಿರ್ಧಾರ ಮಾಡಿ ಮನೆ ಬಿಟ್ಟು ಪರಾರಿಯಾಗುತ್ತಿದ್ದ ವೇಳೆ ಗ್ರಾಮಸ್ಥರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅವರನ್ನ ಹಿಡಿದು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. 

ತಕ್ಷಣವೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅವರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಘಟನೆ ನಡೆದರೂ ಮಹಿಳೆ 16 ವರ್ಷದ ಲವರ್​ ಮನೆಯಲ್ಲೇ ವಾಸವಾಗಿದ್ದಾಗಿ ತಿಳಿದು ಬಂದಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.