ನವದೆಹಲಿ: ವಿವಾಹಿತ ಭಾರತೀಯರಲ್ಲಿ ಸುಮಾರು ಶೇ 55ರಷ್ಟು ಜನರು ಒಮ್ಮೆಯಾದರೂ ತಮ್ಮ ಸಂಗಾತಿಗೆ ವಿಶ್ವಾಸದ್ರೋಹ ಎಸಗಿರುತ್ತಾರೆ. ಶೇ 56ರಷ್ಟು ಮಹಿಳೆಯರು ಇದ್ದಾರೆ ಎಂದು ಭಾರತದ ಮೊದಲ ವಿವಾಹೇತರ ಡೇಟಿಂಗ್ ಅಪ್ಲಿಕೇಷನ್ ಗ್ಲೀಡೆನ್ ಇತ್ತೀಚಿನ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ.
ವಾಸ್ತವವಾಗಿ ಶೇ 48ರಷ್ಟು ಭಾರತೀಯರು ಒಂದೇ ಸಮಯದಲ್ಲಿ ಇಬ್ಬರು ಜನರನ್ನು ಪ್ರೀತಿಸಲು ಸಾಧ್ಯವಿದೆ ಎಂಬುದನ್ನು ನಂಬುತ್ತಾರೆ. ಆದರೆ, ಶೇ 46ರಷ್ಟು ಜನರು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವಾಗ ಮೋಸ ಮಾಡಬಹುದು ಎಂಬ ಭಾವನೆಯೂ ಇದೆ ಎಂದಿದೆ.
ಈ ಭಾವನೆಯಿಂದಾಗಿ ಭಾರತೀಯರು ತಮ್ಮ ಸಂಗಾತಿಯನ್ನು ಕ್ಷಮಿಸಲು ಸಿದ್ಧರಾಗಿದ್ದಾರೆ. ಶೇ 7ರಷ್ಟು ಜನ ಎರಡನೇ ಆಲೋಚನೆಯಿಲ್ಲದೇ ತಮ್ಮ ಸಂಗಾತಿಯನ್ನು ಕ್ಷಮಿಸುತ್ತಾರೆ. ಆದರೆ, ಶೇ 40ರಷ್ಟು ಜನರು ಆ ಸಂದರ್ಭದಲ್ಲಿ ಕ್ಷಮಿಸಿದಂತೆ ಮಾಡುತ್ತಾರೆ. ಶೇ 69ರಷ್ಟು ಕ್ಷಮಿಸಬೇಕೆಂದು ನಿರೀಕ್ಷಿಸುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಪುಣೆ, ಕೋಲ್ಕತಾ ಮತ್ತು ಅಹಮದಾಬಾದ್‌ನಾದ್ಯಂತ 25 ರಿಂದ 50 ವರ್ಷದೊಳಗಿನ 1,525 ಭಾರತೀಯ ವಿವಾಹಿತರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.