ಚೆನ್ನೈ: ಕೊರೊನಾ ವೈರಸ್ ತಮಿಳುನಾಡಿನಲ್ಲಿ ಮೊದಲ ಬಲಿ ಪಡೆದಿದೆ.
ಮಧುರೈನಲ್ಲಿ 54 ವರ್ಷದ ವಯಸ್ಸಿನ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಇಂದು ಮುಂಜಾನೆ ಇಲ್ಲಿನ ರಾಜಾಜಿ ಆಸ್ಪತ್ರೆಯಲ್ಲಿ ಈ ವ್ಯಕ್ತಿ ಸಾವಿಗೀಡಾಗಿದ್ದಾರೆ. ತಮಿಳುನಾಡಿನಲ್ಲಿ ದಾಖಲಾದ ಮೊದಲ ಸಾವು ಇದು ಎಂದು ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಮಾಹಿತಿ ನೀಡಿದ್ದಾರೆ.
ಅನಿಯಂತ್ರಿತ ಮಧುಮೇಹ ಹಾಗೂ ದೀರ್ಘಕಾಲದ ಅನಾರೋಗ್ಯದಿಂದ ಈ ವ್ಯಕ್ತಿ ಬಳಲುತ್ತಿದ್ದರು ಎನ್ನಲಾಗಿದೆ. ನಿನ್ನೆಯ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಒಟ್ಟು 18 ಪ್ರಕರಣಗಳು ಕಂಡುಬಂದಿದ್ದವು.