ETV Bharat / bharat

ಹಾಡಹಗಲೇ ಒಂದೇ ಕುಟುಂಬದ ಐವರ ಭೀಕರ ಹತ್ಯೆ! - ಪಂಜಾಬ್​​ ಸುದ್ದಿ

ಹಾಡಹಗಲೇ ಒಂದೇ ಕುಟುಂಬದ ಐವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಂಜಾಬ್​ನ ಕೈರೋನ್​ ಎಂಬಲ್ಲಿ ನಡೆದಿದೆ.

murdered in panjab
murdered in panjab
author img

By

Published : Jun 25, 2020, 6:56 PM IST

ಪಂಜಾಬ್​: ಇಲ್ಲಿನ ಕೈರೋನ್​ ಗ್ರಾಮದಲ್ಲಿ ಒಂದೇ ಕುಟುಂಬದ ಐವರನ್ನ ಭೀಕರವಾಗಿ ಕೊಲೆ ಮಾಡಲಾಗಿದ್ದು, ಮಾರಕಾಸ್ತ್ರ ಬಳಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಒಂದೇ ಕುಟುಂಬದ ಐವರ ಭೀಕರ ಕೊಲೆ

ಘಟನೆಯಿಂದ ಇಡೀ ಗ್ರಾಮ ಬೆಚ್ಚಿಬಿದ್ದಿದ್ದು, ಭಯದ ವಾತಾವರಣ ನಿರ್ಮಾಣಗೊಂಡಿದೆ. ಕೊಲೆಯಾದವರನ್ನ ಬ್ರಿಜ್​​ ಲಾಲ್​, ಸಂತ್​ ರಾಮ್, ಅಮಂದೀಪ್​ ಪತ್ನಿ ಪರಮ್​ಜಿತ್​​, ಜಸ್ಮೀತ್​​ ಕೌರ್​ ಪತ್ನಿ ಸೋನು ಹಾಗೂ ಗುರುಸಾಹೀಬ್​ ಸಿಂಗ್​ ಪುತ್ರ ಬಕ್ಷಿಶ್​ ಸಿಂಗ್​ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದವರ ನಾಲ್ವರು ಮಕ್ಕಳು ಬದುಕುಳಿದಿದ್ದು, ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿಯವರೆಗೂ ಲಭ್ಯವಾಗಿಲ್ಲ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ​ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಅರಂಭಿಸಿದ್ದು, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್​​ಎಸ್​ಪಿ ಧ್ರುವ್​ ದಹಿಯಾ ಸೇರಿದಂತೆ ಅನೇಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.