ಮಹಾರಾಷ್ಟ್ರ: ಐದು ಮಂದಿ ಕಿಡಿಗೇಡಿಗಳ ಗುಂಪೊಂದು ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಆತನಿಗೆ ಥಳಿಸಿ ಹತ್ಯೆ ಮಾಡಿದ ಅಮಾನವೀಯ ಘಟನೆ ಥಾಣೆಯ ಶ್ರೀನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
5 ಮಂದಿ ಗೂಂಡಾಗಳು ತಮ್ಮನ್ನು 'ಭಾಯ್' ಅಂತ ಕರೆಯಬೇಕು ಎಂದು ದಾದಾಗಿರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆತನನ್ನು ಬೆತ್ತಲೆಗೊಳಿಸಿ ಹೊಡೆದಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಇಬ್ಬರು ಖದೀಮರನ್ನು ಬಂಧಿಸಿದ್ದಾರೆ. ಮುಖ್ಯವಾಗಿ ಈ ಐದು ಮಂದಿ ಕಿಡಿಗೇಡಿಗಳಲ್ಲಿ ಇಬ್ಬರು ಇತ್ತೀಚೆಗಷ್ಟೇ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರಂತೆ.
ಜೂನ್ 12ರಂದು ಭಾರ್ಚೌಕ್ ಎಂಬಲ್ಲಿ ಯುವಕನನ್ನು ಥಳಿಸಿದ್ದರು. ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದ್ದು, ತನಿಖೆ ವೇಳೆ ವಿಡಿಯೋ ಲಭ್ಯವಾಗಿದೆ. ಆ ವಿಡಿಯೋದಲ್ಲಿ ಹೆಸರು ಉಲ್ಲೇಖಿಸಿದ್ದು, ಈ ಮೂಲಕ ಆರೋಪಿಗಳ ಹೆಸರು ತಿಳಿದುಬಂದಿದೆ. ಪೊಲೀಸ್ ಮಾಹಿತಿ ಪ್ರಕಾರ, ಗೂಂಡಾಗಳಲ್ಲಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಸದ್ಯ ಐದು ಮಂದಿ ಮೇಲೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.