ಮುಂಬೈ: ಮುಂಬೈನ ಕೋಟೆ ಪ್ರದೇಶದಲ್ಲಿ ಗುರುವಾರ ಸಂಭವಿಸಿದ ಕಟ್ಟಡ ಕುಸಿತ ದುರಂತಲ್ಲಿ ಸಾವಿಗೀಡಾದವರ ಸಂಖ್ಯೆ6ಕ್ಕೆ ಏರಿಕೆಯಾಗಿದೆ. ಅಲ್ಲದೆ ಇದುವರೆಗೂ 23 ಜನರನ್ನು ರಕ್ಷಿಸಲಾಗಿದೆ.
ಆರು ಅಂತಸ್ತಿನ ಕಟ್ಟಡದ ಒಂದು ಭಾಗದಲ್ಲಿ ಕುಸಿತ ಸಂಭವಿಸಿದ್ದು, ಮೃತಪಟ್ಟವರು ಜೋಖ್ನಾ ಗುಪ್ತಾ (70), ಕುಸುಮ್ ಗುಪ್ತಾ (45), ಪಡುಮ್ಲಾಲ್ ಗುಪ್ತಾ (60) ಹಾಗೂ ಇಬ್ಬರು ವ್ಯಕ್ತಿಗಳ ಗುರುತು ಇನ್ನೂ ತಿಳಿದಿಲ್ಲ. ಗುರುವಾರ ಮಧ್ಯಾಹ್ನ 2:30ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದಿದ್ದರು. 14 ಅಗ್ನಿಶಾಮಕ ದಳ, ಮುಂಬೈ ಪೊಲೀಸರು ಮತ್ತು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.
ಇದನ್ನೂ ಓದಿ: ಕುಸಿದ ಆರಂತಸ್ತಿನ ಹಳೇಯ ಕಟ್ಟಡ: 2 ಸಾವು, ತಾಯಿ-ಮಗಳು ಸೇರಿ ಅನೇಕರು ಅವಶೇಷದಡಿ
ಭಾರಿ ಮಳೆ ನಗರದಲ್ಲಿ ಕಟ್ಟಡ ಕುಸಿತ ಪ್ರಕರಣಗಳು ಹೆಚ್ಚುತ್ತಿದ್ದು, ಬುಧವಾರ ಪಾವ್ವಾಲಾ ಸ್ಟ್ರೀಟ್‌ನಲ್ಲಿ ಮನೆಯ ಭಾಗವೊಂದು ಕುಸಿದು ಇಬ್ಬರು ಗಾಯಗೊಂಡಿದ್ದರು. ಈ ಮಧ್ಯೆ ಮುಂದಿನ 18 ಗಂಟೆಗಳ ಕಾಲ ಮುಂಬೈ ಮತ್ತು ಅದರ ಉಪನಗರಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.