ನವದೆಹಲಿ: ದೇಶದಲ್ಲಿ ಜೈ ಶ್ರೀರಾಮ್ ಹೆಸರಿನ ಮೇಲೆ ಅನೇಕ ದೌರ್ಜನ್ಯಗಳು, ಹಲ್ಲೆಗಳು, ಗುಂಪು ಹತ್ಯೆಗಳು ನಡೆಯುತ್ತಿವೆ. ಇಂತವುಗಳನ್ನು ತಡೆಯಬೇಕು ಮತ್ತು ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಿನಿಮಾ ನಿರ್ದೇಶಕರು, ಸಾಮಾಜಿಕ ಹೋರಾಟಗಾರರು ಸೇರಿದಂತೆ 49 ಮಂದಿ ಸೆಲೆಬ್ರಿಟಿಗಳು ಪ್ರಧಾನಿ ಮೋದಿಗೆ ಮುಕ್ತ ಪತ್ರ ಬರೆದಿದ್ದಾರೆ.
ದೇಶದಲ್ಲಿ ರಾಮನ ಹೆಸರು ಹೇಳಿಕೊಂಡು ರಾಮ ನಾಮವನ್ನು ಅಪವಿತ್ರಗೊಳಿಸಲಾಗುತ್ತಿದೆ. ಜನವರಿ 1 ರಿಂದ 2019ರ ವರೆಗೆ ಧರ್ಮದ ಹೆಸರಿನಲ್ಲಿ 254 ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನು 840 ದಲಿತರ ಮೇಲೆ ಹಲ್ಲೆ ಪ್ರಕರಣಗಳು ನಡೆದಿವೆ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ.
ಸಾಮಾಜಿಕ ಕಾರ್ಯಕರ್ತರು, ಚಲನ ಚಿತ್ರ ನಿರ್ಮಾಪಕರುಗಲಾದ ಅಡೂರ್ ಗೋಪಾಲ ಕೃಷ್ಣನ್, ಮಣಿ ರತ್ನಂ, ಅನುರಾಗ್ ಕಷ್ಯಪ್, ಬಿನಾಯಕ್ ಸೇನ್, ಸೌಮಿತ್ರ ಚಟರ್ಜಿ ಸೇರಿದಂತೆ 49 ಜನ ಸೆಲೆಬ್ರಿಟಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ತಪ್ಪಿತಸ್ತರು ಯಾರೆಂದು ಗುರುತಿಸಿ ಅವರಿಗೆ ಶಿಕ್ಷೆ ನೀಡಬೇಕು. ಅಲ್ಲದೆ ಅಪರಾಧಿಗಳಿಗೆ ಜಾಮೀನು ರಹಿತ ಶಿಕ್ಷೆ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಪತ್ರಕ್ಕೆ ಸಹಿ ಮಾಡಿರುವವರ ಪೈಕಿ ವಿನಾಯಕ್ ಸೇನ್, ಅಂಜನ್ ದತ್, ಮತ್ತು ಗೌತಮ್ ಘೋಶ್, ಯಾರು ಸರ್ಕಾರದ ಬಗ್ಗೆ ಅಗೌರವ ಅಥವಾ ಅಸಭ್ಯವಾಗಿ ವರ್ತಿಸುತ್ತಾರೋ ಅಂತವರನ್ನು ಅರ್ಬನ್ ನಕ್ಸಲ್ ಎಂದು ಗುರುತಿಸಬೇಕೆಂದು ಹೇಳಿದ್ದಾರೆ.