ರಾಂಚಿ: ಕಳೆದೆರಡು ದಿನಗಳ ಹಿಂದೆ ಜಾರ್ಖಂಡ್ನ 81 ಕ್ಷೇತ್ರಗಳ ವಿಧಾನಸಭೆ ಫಲಿತಾಂಶ ಬಹಿರಂಗಗೊಂಡಿದ್ದು, ಹೊಸದಾಗಿ ಆಯ್ಕೆಯಾಗಿರುವ ಶಾಸಕರಲ್ಲಿ ಬರೋಬ್ಬರಿ 41 ಎಂಎಲ್ಎಗಳ ವಿರುದ್ಧ ಕ್ರಿಮಿನಲ್ ಕೇಸ್ ಇರುವುದು ಇದೀಗ ಬಹಿರಂಗಗೊಂಡಿದೆ.
2019ರ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದ ವೇಳೆ, ತಮ್ಮ ಮೇಲಿನ ಅಪರಾದ ಕೃತ್ಯಗಳ ಬಗ್ಗೆ ಅಭ್ಯರ್ಥಿಗಳು ಮಾಹಿತಿ ನೀಡಿದ್ದರು. ಇದೀಗ ಆಯ್ಕೆಗೊಂಡಿರುವ ಶಾಸಕರಲ್ಲಿ ಇಷ್ಟೊಂದು ಹೊಸ ಸದಸ್ಯರ ಮೇಲೆ ಕ್ರಿಮಿನಲ್ ಕೇಸ್ಗಳಿರುವುದು ಗೊತ್ತಾಗಿದೆ. ಇನ್ನು ಶಾಸಕರಾಗಿ ಆಯ್ಕೆಯಾಗಿರುವ ಶಾಸಕರಲ್ಲಿ ಶೇ. 59ರಷ್ಟು ಪದವಿ ಶಿಕ್ಷಣಕ್ಕಿಂತಲೂ ಹೆಚ್ಚಿನ ಶಿಕ್ಷಣ ಪಡೆದುಕೊಂಡಿದ್ದಾರೆ ಎಂಬುದು ಗಮನಾರ್ಹ ವಿಷಯ.
ಯಾವ ಪಕ್ಷದ ಶಾಸಕರ ವಿರುದ್ಧ ಕೇಸ್
- ಜಾರ್ಖಂಡ್ ಮುಕ್ತಿ ಮೋರ್ಚಾದ 17 ಶಾಸಕರು
- ಕಾಂಗ್ರೆಸ್ನ 8 ಶಾಸಕರು
- ಬಿಜೆಪಿಯ 11 ಶಾಸಕರು
ಇನ್ನು 2014ರ ಚುನಾವಣೆಯಲ್ಲಿ 81 ಶಾಸಕರ ಪೈಕಿ 51 ಎಂಎಲ್ಎಗಳ ವಿರುದ್ಧ ಕ್ರಿಮಿನಲ್ ಕೇಸ್ಗಳಿರುವುದು ತಿಳಿದು ಬಂದಿತ್ತು. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್,ಜೆಎಂಎಂ ಹಾಗೂ ಆರ್ಜೆಡಿ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಬರೋಬ್ಬರಿ 47 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿ ಸರ್ಕಾರ ರಚನೆ ಮಾಡಲು ಮುಂದಾಗಿದ್ದು, ಡಿಸೆಂಬರ್ 29ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.