ETV Bharat / bharat

ದೆಹಲಿ ವಿಧಾನಸಭಾ ಚುನಾವಣೆಗೆ ಬಿರುಸಿನಿಂದ ಸಾಗಿದ ಮತದಾನ

ರಾಷ್ಟ್ರ ರಾಜಧಾನಿ ನವದೆಹಲಿ ವಿಧಾನಸಭಾ ಚುನಾವಣೆ ಕ್ಲೈಮಾಕ್ಸ್​ ಹಂತಕ್ಕೆ ಬಂದಿದ್ದು, ಇಂದು ಮತದಾನ ನಡೆಯುತ್ತಿದೆ. ಈ ತಿಂಗಳ 11 ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ.

author img

By

Published : Feb 8, 2020, 5:02 AM IST

Updated : Feb 8, 2020, 8:05 AM IST

Delhi polls, Delhi polls security, Delhi polls security news, Delhi polls security latest news, ದೆಹಲಿ ವಿಧಾನಸಭಾ ಚುನಾವಣೆ, ದೆಹಲಿ ವಿಧಾನಸಭಾ ಚುನಾವಣೆ ಭದ್ರತೆ, ದೆಹಲಿ ವಿಧಾನಸಭಾ ಚುನಾವಣೆ ಮತದಾನ, ದೆಹಲಿ ವಿಧಾನಸಭಾ ಚುನಾವಣೆ ಮತದಾನ ಸುದ್ದಿ,
ಸಂಗ್ರಹ ಚಿತ್ರ

ನವದೆಹಲಿ: 70 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಮತದಾನ ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಒಟ್ಟು 672 ಅಭ್ಯರ್ಥಿಗಳು ಕಣದಲ್ಲಿದ್ದು, 147 ಲಕ್ಷ ಮತದಾರರು ತಮ್ಮ ನಾಯಕರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ರಾಷ್ಟ್ರ ರಾಜಧಾನಿಯಾದ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, 147 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 13,750 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಬೆಳಗ್ಗೆ 8 ಗೆ ಆರಂಭವಾಗಿರುವ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.

ಇನ್ನು ವಿಧಾನಸಭಾ ಚುನಾವಣೆ ಸುಗಮವಾಗಿ ನಡೆಯುವುದಕ್ಕೆ ದೆಹಲಿ ಪೊಲೀಸರು ಸಮರ್ಪಕ ವ್ಯವಸ್ಥೆ ಮಾಡಿದ್ದಾರೆ. ಸುಮಾರು 40,000 ಭದ್ರತಾ ಸಿಬ್ಬಂದಿ, 19,000 ಗೃಹರಕ್ಷಕ ದಳ ಸಿಬ್ಬಂದಿ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

Last Updated : Feb 8, 2020, 8:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.