ETV Bharat / bharat

NASAದ 'ಮೂನ್​ ಫ್ಯಾಕ್ಟ್‌ ಶೀಟ್​'ನಲ್ಲಿ ಅಡಗಿದ ಚಂದ್ರಯಾನದ ರಹಸ್ಯ..

ಶನಿವಾರ ನಸುಕಿನಲ್ಲಿ ಚಂದ್ರಯಾನ- 2ರ ವಿಕ್ರಮ್ ರೋವರ್​ ಇಸ್ರೋದಿಂದ ಸಂಪರ್ಕ ಕಡಿದುಕೊಂಡಿತು. ಈ ಬಳಿಕ ಇಸ್ರೋ ಅಧಿಕಾರಿಗಳು, 'ಚಂದ್ರಯಾನ- 2ರ ವ್ಯೋಮ ಕಾರ್ಯಾಚರಣೆಯು ಕಕ್ಷೆಯಲ್ಲಿ ಸುರಕ್ಷಿತವಾಗಿ ಉಳಿದಿದೆ' ಎಂದು ಹೇಳಿದರು.

ಸಾಂದರ್ಭಿಕ ಚಿತ್ರ
author img

By

Published : Sep 7, 2019, 3:11 PM IST

ನವದೆಹಲಿ: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ 'ಮೂನ್ ಫ್ಯಾಕ್ಟ್ ಶೀಟ್' ಹೊರಡಿಸಿದ್ದು, ಕಳೆದ ಆರು ದಶಕಗಳಲ್ಲಿ ಕೈಗೊಂಡ ಚಂದ್ರಯಾನ ಕಾರ್ಯಾಚರಣೆಗಳ ಯಶಸ್ಸಿನ ಅನುಪಾತವು 60:40ರಲ್ಲಿದೆ ಎಂದು ತಿಳಿಸಿದೆ.

60 ವರ್ಷಗಳ ಅವಧಿಯಲ್ಲಿ ವಿಶ್ವದಾದ್ಯಂತ 109 ಚಂದ್ರಯಾನಗಳು ನಡೆದಿವೆ. ಈ ಪೈಕಿ 61 ಯೋಜನೆಗಳಲ್ಲಿ ಯಶಸ್ವಿಯಾಗಿದ್ದರೇ 48 ಮಿಷನ್​ಗಳು ವಿಫಲವಾಗಿವೆ ಎಂದು ಹೇಳಿದೆ.

ಶನಿವಾರ ನಸುಕಿನಲ್ಲಿ ಚಂದ್ರಯಾನ- 2ರ ವಿಕ್ರಮ್ ರೋವರ್​ ಇಸ್ರೋದಿಂದ ಸಂಪರ್ಕ ಕಡಿದುಕೊಂಡಿತು. ಈ ಬಳಿಕ ಇಸ್ರೋ ಅಧಿಕಾರಿಗಳು, 'ಚಂದ್ರಯಾನ- 2ರ ವ್ಯೋಮ ಕಾರ್ಯಾಚರಣೆಯು ಕಕ್ಷೆಯಲ್ಲಿ ಸುರಕ್ಷಿತವಾಗಿ ಉಳಿದಿದೆ' ಎಂದು ಹೇಳಿದರು.

2018ರ ಫೆಬ್ರವರಿ 18ರಂದು ಇಸ್ರೇಲ್ ಚಂದ್ರಯಾನ ಯೋಜನೆ ರೂಪಿಸಿದ್ದು, ಉದ್ದೇಶಿತ ಗುರಿ ತಲುಪುವಲ್ಲಿ ಅದೂ ಕೂಡ ವಿಫಲವಾಯಿತು. 1958ರಿಂದ 2019 ರವರೆಗೆ ಭಾರತ ಮತ್ತು ಅಮೆರಿಕ ಯುಎಸ್ಎಸ್ಆರ್ (ಈಗ ರಷ್ಯಾ), ಜಪಾನ್, ಯುರೋಪಿಯನ್ ಒಕ್ಕೂಟ ಚೀನಾ ಮತ್ತು ಇಸ್ರೇಲ್ ತಮ್ಮದೆಯಾದ ತಂತ್ರಜ್ಞಾನ ಬಳಸಿ ವಿವಿಧ ರೀತಿಯಲ್ಲಿ ಚಂದ್ರಯಾನ ಕಾರ್ಯಾಚರಣೆಗಳನ್ನು ನಡೆಸಿಕೊಂಡು ಬರುತ್ತಿವೆ. ಅದರಲ್ಲಿ ಕೆಲವು ಯೋಜನೆಗಳು ಯಶಸ್ವಿಯಾಗಿದ್ದರೇ ಮತ್ತೆ ಕೆಲವು ವಿಫಲವಾಗಿವೆ ಎಂದು ತಿಳಿಸಿದೆ.

1958ರ ಅಗಸ್ಟ್ 17ರಂದು ಅಮೆರಿಕ ತನ್ನ ಮೊದಲ ಚಂದ್ರಯಾನವನ್ನು ಪಯೋನೀರ್- 0 ಹೆಸರನಡಿ ಆರಂಭಿಸಿದ್ದು, ಪ್ರಥಮ ಯತ್ನದಲ್ಲಿ ನಿರೀಕ್ಷಿತ ಸಫಲತೆ ಲಭಿಸಲಿಲ್ಲ. 1964ರಲ್ಲಿ ರೆಂಜರ್​ 7 ಮಿಷನ್​ ಚಂದಿರ ಹತ್ತಿರ ಹೋಗಿ ಮೊದಲ ಚಿತ್ರವನ್ನು ಭೂಮಿಗೆ ರವಾನಿಸಿತ್ತು. 1966ರ ಮೇ ಮಿಷನ್ ಸರ್ವೇಯರ್ -1ಅನ್ನು ಯಶಸ್ವಿಯಾಗಿ ಆರಂಭಿಸಿತು. ಬಳಿಕ ಅಪೊಲೊ- 11 ಮಿಷನ್​ ಮೂಲಕ ನೀಲ್ ಆರ್ಮ್‌ಸ್ಟ್ರಾಂಗ್ ಅವರು ಪ್ರಥಮ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟು ಇತಿಹಾಸ ನಿರ್ಮಿಸಿದ್ದರು.

1959ರ ಜನವರಿ 4ರಂದು ಯುಎಸ್ಎಸ್ಆರ್ ಚಂದ್ರಯಾನ ಮಿಷನ್ ಅನ್ನು ಲೂನಾ-1 ಮೂಲಕ ಯಶಸ್ವಿಯಾಗಿ ತಲುಪಿಸಿತು. ಆರು ಯೋಜನೆಗಳ ಬಳಿಕ ಅದಕ್ಕೆ ಈ ಗೆಲುವು ಲಭಿಸಿತ್ತು. 1958ರ ಅಗಸ್ಟ್ ತಿಂಗಳಿಂದ 1959ರ ನವೆಂಬರ್ ಅವಧಿಯ ನಡುವೆ ಅಮೆರಿಕ- ಯುಎಸ್​ಎಸ್​ಆರ್​ 14 ಕಾರ್ಯಾಚರಣೆಗಳನ್ನು ನಡೆಸಿದ್ದವು. ಇದರಲ್ಲಿ ಲೂನಾ- 1, ಲೂನಾ-2 ಮತ್ತು ಲೂನಾ-3ರಲ್ಲಿ ಮಾತ್ರ ಯಶಸ್ಸಿ ದೊರೆತಿದೆ. 1990ರ ಬಳಿಕ ಅಮೆರಿಕ, ಜಪಾನ್, ಭಾರತ, ಐರೋಪ್ಯ ಒಕ್ಕೂಟ, ಚೀನಾ ಮತ್ತು ಇಸ್ರೇಲ್​ ಸೇರಿ 19 ಚಂದ್ರಯಾನಗಳನ್ನು ಕೈಗೊಂಡಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.